ADVERTISEMENT

ಭಾರತವನ್ನು ಭಿಕ್ಷುಕ ದೇಶವಾಗಿ ಬಿಂಬಿಸಿದ್ದು ಕಾಂಗ್ರೆಸ್‌: ನಳಿನ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:56 IST
Last Updated 20 ಜನವರಿ 2023, 22:56 IST
ನಳಿನ್‌ಕುಮಾರ್ ಕಟೀಲ್‌
ನಳಿನ್‌ಕುಮಾರ್ ಕಟೀಲ್‌   

ಬೆಂಗಳೂರು: ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಈ ದೇಶವನ್ನು ಲೂಟಿ ಮಾಡಿದ್ದೂ ಅಲ್ಲದೇ, ಭಿಕ್ಷುಕ ರಾಷ್ಟ್ರವಾಗಿಯೂ ಬಿಂಬಿಸಿತ್ತು. ರೈತರನ್ನು ಕಡೆಗಣಿಸಿದ್ದೂ ಅಲ್ಲದೇ ಅವರಿಗೆ ಅನ್ಯಾಯವನ್ನೂ ಮಾಡಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬದುಕು ಹಸನು ಮಾಡಿದ್ದು ಅಟಲ್‌ ಬಿಹಾರಿ ವಾಜಪೇಯಿ, ಪ್ರಧಾನಿ ಮೋದಿ ಮತ್ತು ಬಿ.ಎಸ್‌.ಯಡಿಯೂರಪ್ಪ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ರೈತರನ್ನು ಮತ ಬ್ಯಾಂಕ್‌ಗೆ ಪೂರಕವಾಗಿ ಮಾತ್ರ ಘೋಷಣೆಗಳನ್ನು ಮಾಡುತ್ತಿದ್ದವು. ಅವರ ಸರ್ವಾಂಗೀಣ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ADVERTISEMENT

*

ಅಪ್ಪ– ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂಬ ಕಿತ್ತಾಟ ಶುರುವಾ<br/>ಗಿದೆ. ಮತ್ತೊಂದು ಪಕ್ಷದಲ್ಲಿ ಸಿಎಂ ಯಾರೆಂಬ ಕಿತ್ತಾಟ ಆರಂಭವಾಗಿದೆ.
–ನಳಿನ್ ಕುಮಾರ್‌ ಕಟೀಲ್‌, ಅಧ್ಯಕ್ಷ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.