ADVERTISEMENT

ಆಡಿಯೊದಲ್ಲಿರುವ ಧ್ವನಿ ಯಾರದ್ದು?: ‘ಆಪರೇಷನ್‌ ಕಮಲ’ ಕುರಿತು ಕಾಂಗ್ರೆಸ್‌ ಕ್ವಿಜ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 11:14 IST
Last Updated 15 ಫೆಬ್ರುವರಿ 2019, 11:14 IST
   

ಬೆಂಗಳೂರು: ‘ಆಪರೇಷನ್‌ ಕಮಲ’ ಆಡಿಯೊವನ್ನು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಅಸ್ತ್ರವಾಗಿ ಬಳಸಿಕೊಂಡಿದ್ದು, ಆಡಿಯೊ ಆಧರಿಸಿ ‘ಕ್ವಿಜ್‌’ ಆರಂಭಿಸುವ ಮೂಲಕ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

ಕೆಪಿಸಿಸಿ ತನ್ನ ಟ್ವಿಟರ್‌ ಖಾತೆಗೆ ಆಡಿಯೊವನ್ನು ಅಪ್‌ಲೋಡ್‌ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನೂ ಕೇಳಿದೆ. ಅವು ಹೀಗಿವೆ–

01. ಆಡಿಯೊದಲ್ಲಿರುವ ಧ್ವನಿ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಯ ಯಾವ ನಾಯಕ ಹೇಳಿದರು?

ADVERTISEMENT

* ಬಿಎಸ್‌ವೈ

* ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ

* ವಿರೋಧ ಪಕ್ಷದ ನಾಯಕ

02. ‘ಆಪರೇಷನ್‌ ಕಮಲ’ದಲ್ಲಿ ಹೇಳಿಕೊಂಡಿರುವಂತೆ ಯಾವ ನಾಯಕ ನ್ಯಾಯಾಧೀಶರನ್ನು ಬುಕ್‌ ಮಾಡಲು ಸಾಮರ್ಥ್ಯ ಹೊಂದಿದ್ದಾರೆ?

* ಶಾ

* ಮೋದಿ

* ಬಿಎಸ್‌ವೈ

03. ‘ಆಪರೇಷನ್‌ ಕಮಲ’ಕ್ಕೆ ಹಣ ಬಂದಿದ್ದು ಎಲ್ಲಿಂದ?

* ರಫೇಲ್‌ ಹಗರಣ

* ನೋಟು ರದ್ಧತಿ

* ಗಣಿ ಮಾಲೀಕರಿಂದ

04. ಫೆಬ್ರವರಿ 10 ರಂದು ಆಡಿಯೊದಲ್ಲಿರುವುದು ಧ್ವನಿ ತಮ್ಮ ಎಂದು ಯಾವ ನಾಯಕ ಹೇಳಿಕೊಂಡಿದ್ದರು.

* ಬಿಎಸ್‌ವೈ

* ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ

* ವಿರೋಧ ಪಕ್ಷದ ನಾಯಕ

05. ಫೆಬ್ರುವರಿ 8 ರಂದು ಆಡಿಯೊದಲ್ಲಿರುವುದು ತಮ್ಮ ಧ್ವನಿ ಅಲ್ಲ ಎಂದು ಹೇಳಿದವರು ಯಾರು?

* ಬಿಎಸ್‌ವೈ

* ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ

* ವಿರೋಧ ಪಕ್ಷದ ನಾಯಕ

06. ₹ 10 ಕೋಟಿ ನೀಡುವುದಾಗಿಯಾವ ಪಕ್ಷದ ನಾಯಕ ಆಮಿಷ ಒಡ್ಡಿದ್ದರು?

* ಬಿಜೆಪಿ

* ಕೆಜೆಪಿ

07. ‘ಆಪರೇಷನ್‌ ಕಮಲ’ದ ಗಾಡ್‌ ಫಾದರ್‌ ಯಾರು?

*ಮೋದಿ

*ಶಾ

*ಬಿಎಸ್‌ವೈ

08. ಆಡಿಯೊದಲ್ಲಿರುವ ಧ್ವನಿ ಯಾರದ್ದು?

*ಮೋದಿ

*ಶಾ

* ಬಿಎಸ್‌ವೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.