ADVERTISEMENT

‘ಗ್ಯಾರಂಟಿ’ ವಿರುದ್ಧ ಮಾತನಾಡಿಲ್ಲ: ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:43 IST
Last Updated 14 ಅಕ್ಟೋಬರ್ 2025, 4:43 IST
ಶಾಸಕ ಆರ್.ವಿ.ದೇಶಪಾಂಡೆ
ಶಾಸಕ ಆರ್.ವಿ.ದೇಶಪಾಂಡೆ   

ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ‘ನಾನು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಿಲ್ಲ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಸೋಮವಾರ ತಿಳಿಸಿದ್ದಾರೆ.

‘ಅರಿವಿಗೆ ಬಾರದಷ್ಟು ವೇಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಜಾರಿಗೊಳಿಸುತ್ತಾರೆ ಎಂದಿದ್ದೇನೆ’ ಎಂದು ಗ್ಯಾರಂಟಿ ಯೋಜನೆಗಳ ಜಾರಿ ಕುರಿತ ತಮ್ಮ ಮಾತಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ.

‘ಸಿದ್ದರಾಮಯ್ಯ  ಅವರಲ್ಲಿ ಜನಪರ ಮನೋಭಾವ ಇರುವ ಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಅವು ಬಡವರ, ದುರ್ಬಲರ ಕಲ್ಯಾಣಕ್ಕೆ ಪೂರಕವಾಗಿವೆ’ ಎಂದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.