ADVERTISEMENT

ಕಾಂಗ್ರೆಸ್‌ನ ‘ಕೈ ಜತೆ ಕೈ ಜೋಡಿಸಿ’ ಕಾರ್ಯಕ್ರಮ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:35 IST
Last Updated 25 ಜನವರಿ 2023, 19:35 IST
   

ಬೆಂಗಳೂರು: ‘ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್‌ ಜೋಡೊ ಯಾತ್ರೆಯ ಸಂದೇಶಗಳಾದ ಭ್ರಾತೃತ್ವ, ಪ್ರೀತಿ, ಶಾಂತಿ ವಿಚಾರಗಳನ್ನು ಜನರಿಗೆ ತಲುಪಿಸಲು ಗುರುವಾರದಿಂದ (ಜ. 26) ‘ಕೈ’ಗೆ ‘ಕೈ’ ಜೋಡಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾರ್ಚ್ 26ರವರೆಗೆ ನಡೆಯಲಿದೆ’ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಪುಣ್ಯತಿಥಿಯ ದಿನ (ಜನವರಿ 30) ‘ಭಾರತ್‌ ಜೋಡೊ’ ಯಾತ್ರೆ ಮುಕ್ತಾಯಗೊಳ್ಳಲಿದೆ’ ಎಂದರು.

‘ಯಾತ್ರೆ ಕಾಶ್ಮೀರ ತಲುಪಿದ್ದು, ರಾಹುಲ್‌ ಗಾಂಧಿ ಇದುವರೆಗೂ ಸುಮಾರು 3,900 ಕಿ.ಮೀ ದೂರ ಅವರು ಹೆಜ್ಜೆ ಹಾಕಿದ್ದಾರೆ’ ಎಂದರು.

ADVERTISEMENT

‘ಬಡತನ, ನಿರುದ್ಯೋಗ ವಿಚಾರವಾಗಿ ಮಾತನಾಡಲು ಕೇಂದ್ರದ ಬಿಜೆಪಿ ಸರ್ಕಾರ ತಯಾರಿಲ್ಲ. ಹೀಗಾಗಿ, ಈ ವಿಚಾರಗಳ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಪಕ್ಷ ಈ ಯಾತ್ರೆ ನಡೆಸಿದೆ. ಆ ಮೂಲಕ, ಸರ್ಕಾರಕ್ಕೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.