ADVERTISEMENT

ನೇಮಕಾತಿಗೂ ಮುನ್ನ PSI ಸಮವಸ್ತ್ರ ಧರಿಸಿ ಪೋಸ್‌ ಕೊಟ್ಟಿದ್ದ ಕಾನ್‌ಸ್ಟೆಬಲ್ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಮೇ 2022, 13:13 IST
Last Updated 5 ಮೇ 2022, 13:13 IST
ಬಸನಗೌಡ (PSI ಸಮವಸ್ತ್ರದಲ್ಲಿರುವ ವ್ಯಕ್ತಿ)
ಬಸನಗೌಡ (PSI ಸಮವಸ್ತ್ರದಲ್ಲಿರುವ ವ್ಯಕ್ತಿ)   

ಬೆಂಗಳೂರು: 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ‍್ಯಾಂಕ್‌ ಪಡೆಯುತ್ತಿದ್ದಂತೆ ಎರಡು ಸ್ಟಾರ್ ಸಮೇತ ಸಮವಸ್ತ್ರ ಧರಿಸಿದ್ದ ಆರೋಪದಡಿ ವಿವೇಕನಗರ ಠಾಣೆ ಕಾನ್‌ಸ್ಟೆಬಲ್ ಬಸನಗೌಡ ಟಿ. ಕರೇಗೌಡರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪಿಎಸ್‌ಐ ನೇಮಕಾತಿ ಆದೇಶಕ್ಕೂ ಮುನ್ನವೇಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ಬಸನಗೌಡ ಕರೇಗೌಡ, ಸಮವಸ್ತ್ರ ಧರಿಸಿ ತಮ್ಮೂರಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಕಾನ್‌ಸ್ಟೆಬಲ್ ಬಸನಗೌಡನನ್ನುಅಮಾನತು ಮಾಡಿದ್ದಾರೆ.

ಪಿಎಸ್‌ಐ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಬಸನಗೌಡ ಅವರನ್ನೂ ವಿಚಾರಣೆ ಮಾಡಿದ್ದರು. ಒಎಂಆರ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಪಡೆದಿದ್ದರು. ವಿಚಾರಣೆ ಎದುರಿಸಿದ್ದ ಬಸನಗೌಡ, ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು.

ADVERTISEMENT

‘ನೇಮಕಾತಿ ಆದೇಶವಿಲ್ಲದೇ ಸಮವಸ್ತ್ರ ಧರಿಸುವುದು ನಿಯಮ ಬಾಹಿರ. ಹೀಗಾಗಿ, ಬಸನಗೌಡ ಅವರನ್ನು ಅಮಾನತು ಮಾಡಲಾಗಿದೆ. ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.