ADVERTISEMENT

ದಸರಾಗೆ ಹಣ ಕೊಡಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗುತ್ತಿಗೆದಾರರ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 16:10 IST
Last Updated 26 ಸೆಪ್ಟೆಂಬರ್ 2025, 16:10 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಗುತ್ತಿಗೆದಾರರು ಹಾಗೂ ಕಾರ್ಮಿಕರಿಗೆ ಅತ್ಯಂತ ಮಹತ್ವದ ಹಬ್ಬವಾಗಿರುವ ದಸರಾ ಆರಂಭವಾಗಿದ್ದು, ಎಲ್ಲರಿಗೂ ಅನುಕೂಲವಾಗುವ ದೃಷ್ಟಿಯಿಂದ ಎಲ್ಲ ಇಲಾಖೆಗಳಲ್ಲಿ ಬಾಕಿ ಬಿಲ್‌ಗಳ ಬಿಡುಗಡೆ ಸೂಚನೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮನವಿ ಮಾಡಿಕೊಂಡಿದೆ.

‘ಯುಗಾದಿ ಮತ್ತು ದಸರಾ ಆಚರಣೆ– ಸಂಭ್ರಮ ಗುತ್ತಿಗೆದಾರರಿಗೆ ವಿಶೇಷವಾಗಿರುತ್ತವೆ. ಈವರೆಗೆ ಎಲ್ಲ ಸರ್ಕಾರಗಳು, ಮುಖ್ಯಮಂತ್ರಿಗಳು ಈ ಹಬ್ಬಗಳ ಸಂದರ್ಭದಲ್ಲಿ ಬಿಲ್‌ಗಳ ಹಣ ಬಿಡುಗಡೆ ಮಾಡಿದ್ದಾರೆ. ತಾವೂ ಈ ಬಾರಿ ಹಣ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಕಳೆದ ಮೂರು ವರ್ಷಗಳಿಂದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಣ ಬಿಡುಗಡೆ ಆಗಿಲ್ಲ. ಈ ಬಾರಿ ದಸರಾಗೆ ಹಣ ಬಿಡುಗಡೆ ಮಾಡಬೇಕು. ಕಾರ್ಮಿಕರಿಗೆ ಮುಂಗಡ ಹಾಗೂ ಬೋನಸ್ ನೀಡುವ ಆಚರಣೆಗಳಿವೆ. ಹೀಗಾಗಿ, ತಾವು ಕಾರ್ಮಿಕರ ಸಮಸ್ಯೆಗಳನ್ನು ಅರಿತು, ಬಾಕಿ ಬಿಲ್‌ ಪಾವತಿಸಲು ಎಲ್ಲ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳಿಗೆ ತುರ್ತಾಗಿ ಸೂಚಿಸಬೇಕು. ನಾಡಹಬ್ಬ ದಸರಾ ಆಚರಣೆಗೆ ನಮಗೆಲ್ಲ ಅವಕಾಶ ಮಾಡಿಕೊಡಬೇಕು’ ಎಂದು ಮುಖ್ಯಮಂತ್ರಿಯವರಿಗೆ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಅವರು ಪತ್ರ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.