ADVERTISEMENT

ಕೋವಿಡ್‌–19 ಭೀತಿ: ಚೀನಾ ವ್ಯಕ್ತಿ ತಂಗಲು ಅವಕಾಶ ನಿರಾಕರಣೆ, ಸ್ಥಳೀಯರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 6:03 IST
Last Updated 19 ಮಾರ್ಚ್ 2020, 6:03 IST
ಚೀನಾ ಮೂಲದ ವ್ಯಕ್ತಿಗೆ ಸ್ಥಳೀಯರು ಮಾಸ್ಕ್‌ ನೀಡಿದರು
ಚೀನಾ ಮೂಲದ ವ್ಯಕ್ತಿಗೆ ಸ್ಥಳೀಯರು ಮಾಸ್ಕ್‌ ನೀಡಿದರು    

ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರಕ್ಕೆ ಬುಧವಾರ ರಾತ್ರಿ ಬಂದಿದ್ದ ಚೀನಾದ ವ್ಯಕ್ತಿಗೆ ತಂಗಲು ಲಾಡ್ಜ್ನವರು ಕೊಠಡಿ ಕೊಡದಿದ್ದರಿಂದ ಆತ ಪೆಟ್ರೊಲ್ ಬಂಕ್ ಬಳಿ ಮಲಗಿ ಗುರುವಾರ ಬೆಳಗಿನ ಜಾವ ಬೆಂಗಳೂರು ಕಡೆಗೆಬಸ್‌ನಲ್ಲಿ ತೆರಳಿದ್ದಾನೆ.

ಮಂಗಳೂರು ಕಡೆಯಿಂದ ಬುಧವಾರ ರಾತ್ರಿ 8.30ರ ಸುಮಾರಿಗೆ ಈತ ಕೊಟ್ಟಿಗೆಹಾರಕ್ಕೆ ಬಂದಿದ್ದಾನೆ. ಸಾರ್ವಜನಿಕರು ಆತನನ್ನು ವಿಚಾರಿಸಿದ್ದಾರೆ. ಎರಡು ತಿಂಗಳಿನಿಂದ ಭಾರತದಲ್ಲಿ ಇದ್ದೇನೆ. ಮಹಾರಾಷ್ಟ್ರದಲ್ಲಿ 28 ದಿನಗಳು ಪರಿವೀಕ್ಷಣೆ ಮಾಡಿದ್ದಾರೆ. ಸಮಸ್ಯೆ ಇಲ್ಲ ಎಂದು ಆತ ಹೇಳಿದ್ದಾನೆ.

ಮುಂಬೈ ವೈದ್ಯಾಧಿಕಾರಿಯೊಬ್ಬರು ನೀಡಿರುವ ಪ್ರಮಾಣ ಪತ್ರ ತೋರಿಸಿದ್ದಾನೆ.

ತಂಗಲು ಲಾಡ್ಜ್ ನವರು ಜಾಗ ಕೊಡದಿದ್ದರಿಂದ ಆತ ಪೆಟ್ರೋಲ್ ಬಂಕ್ ಬಳಿ ಮಲಗಿ, ಬೆಳಿಗ್ಗೆ 5.30 ರ ಬಸ್ (ಬೆಂಗಳೂರು ಕಡೆ) ಏರಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.