ADVERTISEMENT

ಬೆಂಗಳೂರಿನಲ್ಲಿ ಮತ್ತೊಬ್ಬರಿಗೆ ಕೊರೊನಾ ವೈರಸ್ ಸೋಂಕು: ರಾಜ್ಯದಲ್ಲಿ ಐದನೇ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 11:59 IST
Last Updated 12 ಮಾರ್ಚ್ 2020, 11:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಕೊರೊನಾ ವೈರಸ್ ಸೋಂಕು ಹೊಂದಿರುವ ವ್ಯಕ್ತಿ ಪತ್ತೆಯಾಗಿದ್ದಾರೆ. ಇದರಿಂದ ಒಟ್ಟು 5 ಜನ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೊಂದಿರುವ ವ್ಯಕ್ತಿಗಳು ಪತ್ತೆಯಾದಂತಾಗಿದೆ.

ಸೋಂಕು ಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರು ಮುಂಬೈ ಮೂಲದವರು ಎಂದು ತಿಳಿದುಬಂದಿದೆ.

ಮಾರ್ಚ್‌ 6 ರಂದು ಗ್ರೀಸ್‌ನಿಂದ ಈ ವ್ಯಕ್ತಿಯು ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಮಾರ್ಚ್ 8ರಂದು ಬೆಂಗಳೂರಿನ‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಮಾರ್ಚ್ 9ರಂದು ಈ ವ್ಯಕ್ತಿಯು ಕಚೇರಿಗೆ ತೆರಳಿದ್ದರು. ಆಗ ಆತ ಕೇವಲ 4 ಜನ ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸ್ ಆಗಿದ್ದರು.

ADVERTISEMENT

ಆ ಕಚೇರಿಯಲ್ಲಿ 154 ಉದ್ಯೋಗಿಗಳಿದ್ದಾರೆ. ಆದರೆ ಇವರು ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದರು. ಅದೇ ದಿನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ತಮ್ಮ ಸೋದರನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿ ‌ಇದ್ದಾರೆ.

ಸೋಂಕು ಪೀಡಿತ ವ್ಯಕ್ತಿಯ ಬೆಂಗಳೂರಿಗೆ ಬಂದಾಗ ಆಟೋದಲ್ಲಿ ಪ್ರಯಾಣ ಮಾಡಿದ್ದರು. ಆ ಆಟೋ ಡ್ರೈವರ್ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.