ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಸಂಜೆ 5 ಗಂಟೆಯ ವರೆಗೂ ಕೋವಿಡ್–19 ದೃಢಪಟ್ಟಿರುವ ಪ್ರಕರಣಗಳು 163ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಒಟ್ಟು 4 ಮಂದಿ ಸಾವಿಗೀಡಾಗಿದ್ದು, 20 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಏಪ್ರಿಲ್ 5, ಭಾನುವಾರ ಸಂಜೆ 5 ರಿಂದ ಸೋಮವಾರ ಸಂಜೆಯ ವರೆಗೂ ಒಟ್ಟು 12 ಹೊಸ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಏಳು ಮಂದಿ ಮೈಸೂರಿನವರು, ಇಬ್ಬರು ಬಾಗಲಕೋಟೆ, ಬೆಂಗಳೂರು, ಕೇರಳ ಹಾಗೂ ಬೆಂಗಳೂರು ಗ್ರಾಮಾಂತರದ ತಲಾ ಒಬ್ಬರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ಇವರಲ್ಲಿ ಮೈಸೂರಿನ ಮೂವರು ಹಾಗೂ ಬೆಂಗಳೂರು ಗ್ರಾಮಾಂತರದ ಒಬ್ಬ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.
ಪ್ರಸ್ತುತ ಒಬ್ಬರು ಗರ್ಭಿಣಿ ಸೇರಿದಂತೆ 139 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಮೂವರಿಗೆ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿದಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 163 ಪ್ರಕರಣಗಳ ಪೈಕಿ 9 ಮಂದಿ ಕೇರಳ ಮೂಲದವರಾಗಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರಲು ತೆರಳುವಾಗಪತ್ತೆ ಮಾಡಿ, ರಾಜ್ಯದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ ಕಾರವಾರ ಬಂದರಿನಲ್ಲಿ 22 ಜನರನ್ನು ತಪಾಸಣೆ ಒಳಪಡಿಸಲಾಗಿದೆ.
ಬೆಂಗಳೂರು | 59 |
ಮೈಸೂರು | 35 |
ಚಿಕ್ಕಬಳ್ಳಾಪುರ | 07 |
ದಕ್ಷಿಣ ಕನ್ನಡ | 12 |
ಕಲಬುರ್ಗಿ | 05 |
ದಾವಣಗೆರೆ | 03 |
ಉಡುಪಿ | 03 |
ಬಳ್ಳಾರಿ | 06 |
ತುಮಕೂರು | 01 |
ಕೊಡಗು | 01 |
ಧಾರವಾಡ | 01 |
ಬೀದರ್ | 10 |
ಬಾಗಲಕೋಟೆ | 03 |
ಬೆಳಗಾವಿ | 07 |
ಬೆಂಗಳೂರು ಗ್ರಾಮಾಂತರ | 02 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.