ADVERTISEMENT

ಪ್ರಜ್ವಲ್‌ ರೇವಣ್ಣ ಪ್ರಕರಣ: ಸ್ಪಷ್ಟನೆ ಕೇಳಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 16:00 IST
Last Updated 30 ಜುಲೈ 2025, 16:00 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ‘ಮನೆಗೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಕೆಲವು ತಾಂತ್ರಿಕ ಸಾಕ್ಷ್ಯಗಳ ಕುರಿತಂತೆ ಸ್ಪಷ್ಟನೆ ಅಗತ್ಯವಿದ್ದು ಅವುಗಳನ್ನು ನ್ಯಾಯಾಯಲಕ್ಕೆ ವಿಶದಪಡಿಸಿ’ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಷನ್‌ ಮತ್ತು ಪ್ರಜ್ವಲ್‌ ಪರ ವಕೀಲರಿಗೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆದೇಶ ಪ್ರಕಟಿಸಬೇಕಿದ್ದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು, ‘ಗೂಗಲ್ ಮ್ಯಾಪ್ ಆಧರಿಸಿ ವಾದ ಮಂಡಿಸಿದ್ದೀರಿ. ಗೂಗಲ್ ಸಂಸ್ಥೆಯಿಂದ ಅಧಿಕೃತ ಮಾಹಿತಿ ಇಲ್ಲದ ದಾಖಲೆ ಪರಿಗಣಿಸಬಹುದೇ’ ಎಂದು ಉಭಯ ಪಕ್ಷಗಾರರನ್ನು ಪ್ರಶ್ನಿಸಿದರು.

'ಹೊಳೆನರಸೀಪುರ ಫಾರ್ಮ್ ಹೌಸ್ ತೋರಿಸಲು ಗೂಗಲ್ ಮ್ಯಾಪ್ ಬಳಕೆ ಮಾಡಲಾಗಿದೆ ಎಂಬುದು ಮತ್ತು ಮಹಜರು ವೇಳೆ ಆರೋಪಿಯ ಮೊಬೈಲ್‌ ಫೋನ್‌ ಸ್ಯಾಮ್ಸಂಗ್‌ ಜೆ 4 ಜಪ್ತಿ ಮಾಡಲಾಗಿರುವುದನ್ನು ಪರಿಶೀಲಿಸಲಾಗಿದೆ. ಈ ಕುರಿತಂತೆ ವಿಚಾರಣೆ ವೇಳೆ ಗೂಗಲ್ ಮ್ಯಾಪ್ ಆಧರಿಸಿ ಉಭಯತ್ರರೂ ವಾದ ಮಂಡಿಸಿದ್ದೀರಿ. ಹೀಗಾಗಿ, ಗೂಗಲ್ ಸಂಸ್ಥೆಯ ಅಧಿಕೃತ ಮಾಹಿತಿ ಇಲ್ಲದೆ ದಾಖಲೆ ಪರಿಗಣಿಸಬಹುದೇ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ನ್ಯಾಯಾಧೀಶರು ಉಭಯ ಪಕ್ಷಗಾರರಿಗೆ ಸೂಚಿಸಿದರು. ಬಳಿಕ, ಆಗಸ್ಟ್‌ 1ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು. ಪ್ರಾಸಿಕ್ಯೂಷನ್‌ ಪರ ಬಿ.ಎನ್‌.ಜಗದೀಶ್‌, ಅಶೋಕ್‌ ನಾಯಕ್‌ ಮತ್ತು ಪ್ರಜ್ವಲ್‌ ಪರ ಅರುಣ್‌ ಹಾಗೂ ವಿಪುಲ್‌ ಜೈನ್‌ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.