ADVERTISEMENT

ಕೋವಿಡ್ | ಸರ್ಕಾರದ ಆದೇಶ ಉಲ್ಲಂಘನೆ: ಬೆಳಗಾವಿಯ ಶಾಲೆಗಳಿಗೆ ನೋಟಿಸ್ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 6:44 IST
Last Updated 14 ಮಾರ್ಚ್ 2020, 6:44 IST
   

ಬೆಳಗಾವಿ: ಕೋವಿಡ್‌–19 ವೈರಸ್‌ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಬೆಳಗಾವಿಯ ಕೆಲವು ಶಾಲೆಗಳು ತೆರೆದಿರುವುದುಶನಿವಾರ ಬೆಳಕಿಗೆ ಬಂದಿದೆ.

ನಗರದ ಕಾಲೇಜು ರಸ್ತೆಯಲ್ಲಿರುವ ಮಹಿಳಾ ವಿದ್ಯಾಲಯ ಹಾಗೂ ಅಶೋಕ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಾಲೆ ಎಂದಿನಂತೆ ಬೆಳಿಗ್ಗೆ ತೆರೆದಿದ್ದವು. ರಜೆಯ ಬಗ್ಗೆ ಮಾಹಿತಿ ಇರದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದು, ಕೊಠಡಿಯಲ್ಲಿ ಆಸೀನರಾಗಿದ್ದರು. ಕೆಲವು ಮಕ್ಕಳು ಮೈದಾನದಲ್ಲಿ ಆಟವಾಡಿದರು.

ನೋಟಿಸ್‌ ನೀಡಲುಸೂಚನೆ
‘ಶಾಲೆಗಳು ತೆರೆದಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಸಿಬ್ಬಂದಿಯನ್ನು ಕಳುಹಿಸಿ, ಶಾಲೆಗಳನ್ನು ಮುಚ್ಚಿಸಿದ್ದೇವೆ. ಸರ್ಕಾರದ ಆದೇಶದ ಹೊರತಾಗಿಯೂ ಶಾಲೆಗಳನ್ನು ತೆರೆದಿರುವ ಆಡಳಿತ ಮಂಡಳಿಗೆ ನೋಟಿಸ್‌ ನೀಡುವಂತೆ ಬಿಇಒಗೆ ಸೂಚನೆ ನೀಡಿದ್ದೇನೆ’ ಎಂದು ಡಿಡಿಪಿಐ ಎ.ಬಿ. ಪುಂಡಲೀಕ ತಿಳಿಸಿದರು.

ADVERTISEMENT

‘6ನೇ ತರಗತಿಯ ಮಕ್ಕಳಿಗೆ ರಜೆ ಘೋಷಿಸಲಾಗಿದೆ. 7 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳ ದಿನಗಳಂದು ಮಾತ್ರ ಶಾಲೆಗೆ ಬರಬೇಕು ಎಂದು ತಿಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.