ADVERTISEMENT

ಬೆಂಗಳೂರು | 1,315 ಹೊಸ ಪ್ರಕರಣ, 47 ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:51 IST
Last Updated 13 ಜುಲೈ 2020, 20:51 IST
   

ಬೆಂಗಳೂರು: ನಗರದಲ್ಲಿ ಸೋಮವಾರ 1,315 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ 47 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 321ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 19,702ಕ್ಕೆ ತಲುಪಿದ್ದು, ಈ ಪೈಕಿ 15,052 ಸಕ್ರಿಯ ಪ್ರಕರಣಗಳೇ ಇವೆ. ಸೋಮವಾರ ದೃಢಪಟ್ಟವರಲ್ಲಿ 802 ಪುರುಷರು (47 ಮಂದಿ ಬಾಲಕರು) ಹಾಗೂ 513 ಮಹಿಳೆಯರು (37 ಬಾಲಕಿಯರು) ಸೇರಿದ್ದಾರೆ. 297 ಮಂದಿ 20 ವರ್ಷದ ಆಸುಪಾಸಿನವರು. 297 ಮಂದಿ 30ರ ಆಸುಪಾಸಿನವರು ಇದ್ದು, 40ರ ಆಸುಪಾಸಿನಲ್ಲಿರುವವರ ಸಂಖ್ಯೆ 273ರಷ್ಟಿದೆ.

ನಗರದಲ್ಲಿ‌ ಕೋವಿಡ್ ಸೋಂಕಿತರು ಪತ್ತೆಯಾಗುವ ಪ್ರಮಾಣ ಶೇ 10.97ರಷ್ಟಿದ್ದು, ಆ್ಯಂಟಿಜೆನ್‌ ಪರೀಕ್ಷೆಯ ಫಲಿತಾಂಶಗಳು ಬಂದ ನಂತರ ಈ ಪ್ರಮಾಣ ಹೆಚ್ಚಬಹುದೇ ಎಂಬ ಆತಂಕ ಮನೆಮಾಡಿದೆ.

ADVERTISEMENT

ಪಟ್ಟಾಭಿರಾಮ ನಗರ, ಗಾಯತ್ರಿ ನಗರ, ಸಿಂಗಸಂದ್ರ, ಛಲವಾದಿಪಾಳ್ಯ, ಹೊರಮಾವು, ಜಯನಗರ ಪೂರ್ವ, ಸಂಪಂಗಿರಾಮನಗರ, ಬೇಗೂರು, ಶಾಂತಲಾನಗರ, ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌, ರಾಯಪುರ, ಹಗಡೂರು, ಬಸವನಗುಡಿ ಮತ್ತು ಬಸವನಪುರದಲ್ಲಿ ಅಧಿಕ ಸಂಖ್ಯೆಯ ಸೋಂಕಿತರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.