ADVERTISEMENT

ಪಿ.ಎಂ ಕೇರ್ಸ್ ನಿಧಿ ಲೆಕ್ಕ ಕಾಂಗ್ರೆಸ್‌ನವರಿಗೇಕೆ ಕೊಡಬೇಕು?

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 7:30 IST
Last Updated 21 ಜೂನ್ 2021, 7:30 IST
ಸಚಿವ ಬಿ.ಸಿ ಪಾಟೀಲ
ಸಚಿವ ಬಿ.ಸಿ ಪಾಟೀಲ    

ಹಾವೇರಿ: ‘ಪಿ.ಎಂ. ಕೇರ್ಸ್‌’ ನಿಧಿಯ ಬಗ್ಗೆ ಕಾಂಗ್ರೆಸ್‌ನವರಿಗೆ ಏಕೆ ಲೆಕ್ಕ ಕೊಡಬೇಕು. ಅವರಿಗೆ ಲೆಕ್ಕ ಕೇಳುವ ಅಧಿಕಾರವೇನಿದೆ. ಜನತೆ ಕೇಳಿದರೆ ಮಾತ್ರ ನಾವು ಲೆಕ್ಕ ಕೊಡುತ್ತೇವೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕಾಂಗ್ರೆಸ್ ಮುಖಂಡರ ಟೀಕೆಗೆ ತಿರುಗೇಟು ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್‌ನವರಿಗೆ ಆರೋಪ ಮಾಡುವುದನ್ನು ಬಿಟ್ಟರೆ, ಬೇರೆ ಏನು ಕೆಲಸವಿದೆ ಎಂದರು.

‘ಬಿಜೆಪಿಯಿಂದ ರಾಮದ್ರೋಹ’ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಶ್ರೀರಾಮನ ದೇವಸ್ಥಾನ ಕಟ್ಟಬೇಕು ಅಂತ ನಿರ್ಧಾರ ಕೈಗೊಂಡವರೇ ಬಿಜೆಪಿಯವರು. ಪ್ರಣಾಳಿಕೆಯಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನರು ದೇಣಿಗೆ ನೀಡಿದ ಹಣವನ್ನು ದುರುಪಯೋಗ ಮಾಡಿಕೊಳ್ಳುವಂಥ ಅವಶ್ಯಕತೆ ಬಿಜೆಪಿಗಿಲ್ಲ’ ಎಂದರು.

ADVERTISEMENT

ಪಕ್ಷದಲ್ಲಿರುವ ಯಾವುದೇ ವ್ಯಕ್ತಿ ಅಶಿಸ್ತು ಪ್ರದರ್ಶನ ಮಾಡಿದರೆ ಹಾಗೂ ಪಕ್ಷ ವಿರೋಧಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ‘ಕಿಕ್‌ ಬ್ಯಾಕ್‌’ ಆರೋಪ ಆಧಾರರಹಿತ. ಕೆಟಿಟಿಪಿ ಕಾಯ್ದೆ ಪ್ರಕಾರವೇ ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.