ADVERTISEMENT

ಸರ್ಕಾರ ಮೃತರ ಸಂಖ್ಯೆ ಮರೆಮಾಚುತ್ತಿದೆ: ವಿ.ಆರ್ ಸುದರ್ಶನ್ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 20:33 IST
Last Updated 13 ಜುಲೈ 2021, 20:33 IST
ಉತ್ತರಹಳ್ಳಿ ಸಮೀಪದ ಅರೇಹಳ್ಳಿ ನಿವಾಸಿ ನಾಗರಾಜ್‌ ಕೋವಿಡ್‌ನಿಂದ ಮೃತಪಟ್ಟಿದ್ದು ಅವರ ಪತ್ನಿ ನಾಗರತ್ನ ಅವರಿಗೆ ವಿ.ಆರ್‌.ಸುದರ್ಶನ್‌ ಹಾಗೂ ಆರ್‌.ಕೆ.ರಮೇಶ್‌ ಪರಿಹಾರದ ಚೆಕ್‌ ವಿತರಿಸಿದರು.
ಉತ್ತರಹಳ್ಳಿ ಸಮೀಪದ ಅರೇಹಳ್ಳಿ ನಿವಾಸಿ ನಾಗರಾಜ್‌ ಕೋವಿಡ್‌ನಿಂದ ಮೃತಪಟ್ಟಿದ್ದು ಅವರ ಪತ್ನಿ ನಾಗರತ್ನ ಅವರಿಗೆ ವಿ.ಆರ್‌.ಸುದರ್ಶನ್‌ ಹಾಗೂ ಆರ್‌.ಕೆ.ರಮೇಶ್‌ ಪರಿಹಾರದ ಚೆಕ್‌ ವಿತರಿಸಿದರು.   

ಬೆಂಗಳೂರು: ‘ರಾಜ್ಯ ಸರ್ಕಾರವು ಕೋವಿಡ್‌ನಿಂದ ಮೃತಪಟ್ಟವರ ವಾಸ್ತವ ಸಂಖ್ಯೆ ನೀಡುತ್ತಿಲ್ಲ. ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್ ಸುದರ್ಶನ್ ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಆರ್‌.ಕೆ.ರಮೇಶ್‌ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯಧನ ನೀಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಬೂತ್‌, ವಾರ್ಡ್‌, ಹೋಬಳಿ ಹಾಗೂ ಬ್ಲಾಕ್‌ ಮಟ್ಟದಲ್ಲಿ ಎಷ್ಟು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ವರದಿಯ ಆಧಾರದಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ’ ಎಂದರು.

ADVERTISEMENT

ಆರ್.ಕೆ.ರಮೇಶ್ ‘ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಕೋವಿಡ್‌ ಸಮಯದಲ್ಲಿ ಮನೆ ಬಿಟ್ಟು ಹೊರಬರಲಿಲ್ಲ. ಸೋಂಕಿತರ ಅಳಲು ಕೇಳಲಿಲ್ಲ. ನೊಂದವರಿಗಾಗಿ ಮಿಡಿಯಲಿಲ್ಲ. ಬದಲಾಗಿ ಸಹಾಯ ಮಾಡುವವರಿಗೆ ಬೆದರಿಕೆಯೊಡ್ಡುತ್ತಿದ್ದರು. ಬಿಜೆಪಿ ಕಾರ್ಯಕರ್ತರಿಗಷ್ಟೇ ಹಾಸಿಗೆ ಹಾಗೂ ಆಮ್ಲಜನಕ ಸಿಗುವಂತೆ ನೋಡಿಕೊಂಡಿದ್ದರು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.