ADVERTISEMENT

Covid-19 Karnataka Update: ನಾಲ್ಕು ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 20:40 IST
Last Updated 17 ಆಗಸ್ಟ್ 2020, 20:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 115 ಮಂದಿ ಸಾವಿಗೀಡಾಗುವುದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ನಾಲ್ಕು ಸಾವಿರದ (4,062) ಗಡಿ ದಾಟಿದೆ.

ಹೊಸದಾಗಿ 6,317 ಮಂದಿಗೆ ಸೋಂಕು ತಗುಲಿದ್ದರೆ, 7,071 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿನ ಪ್ರಕರಣಗಳ ಸಂಖ್ಯೆ 2,33,283ಕ್ಕೆ ತಲುಪಿದೆ. ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಾಗಿದ್ದು, ಒಟ್ಟು 1,48,562 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸದ್ಯ 80,643 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಆಸ್ಪತ್ರೆ, ಕೊರೊನಾ ಆರೈಕೆ ಕೇಂದ್ರಗಳುಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 695 ಮಂದಿಗೆ ತೀವ್ರ ನಿಗಾ ಘಟಕದಲ್ಲಿಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಆ.17ರಂದು ರ‍್ಯಾಪಿಡ್ ಆ್ಯಂಟಿಜನ್, ಆರ್‌ಟಿ–ಪಿಸಿಆರ್ ಸೇರಿ ಒಟ್ಟು 37,700 ಸೋಂಕು ಪರೀಕ್ಷೆಗಳು ನಡೆದಿವೆ.

ಜಿಲ್ಲಾವಾರು ಸೋಂಕು ಪ್ರಕರಣ: ಬೆಂಗಳೂರಿನಲ್ಲಿ ಒಂದೇ ದಿನ 2,053 ಮಂದಿಗೆ ಸೋಂಕು ದೃಢಪಟ್ಟಿದ್ದು, 39 ಜನ ಸಾವಿಗೀಡಾಗಿದ್ದಾರೆ. ಅದೇ ರೀತಿ, ಮೈಸೂರು (597),ಶಿವಮೊಗ್ಗ (397), ಬಳ್ಳಾರಿ (319),ಉಡುಪಿ (268),ಹಾಸನ (250), ಕಲಬುರಗಿ (211) ಹಾಗೂ ಧಾರವಾಡದಲ್ಲಿ (201) ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಬೆಳಗಾವಿಯಲ್ಲಿ 9, ದಕ್ಷಿಣ ಕನ್ನಡದಲ್ಲಿ 8, ಹಾಸನ 9, ಕಲಬುರಗಿ 7, ಮೈಸೂರಿನಲ್ಲಿ ಐವರು ಸೋಮವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.