ಬೆಂಗಳೂರು: ‘ಮನೆ ಆರೈಕೆಯಲ್ಲಿದ್ದು ಗುಣಮುಖರಾದ ಕೋವಿಡ್ ರೋಗಿಗಳಿಗೆ ಯಾವುದೇ ಪ್ರಮಾಣಪತ್ರ ನೀಡಲಾಗುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ.
ಕೆಲ ಖಾಸಗಿ ಸಂಸ್ಥೆಗಳು ಮನೆ ಆರೈಕೆಯಲ್ಲಿದ್ದವರಿಂದ ಪ್ರಮಾಣಪತ್ರ ಕೇಳುತ್ತಿವೆ. ಬಿಬಿಎಂಪಿಯಿಂದ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ನಾವು ಯಾರಿಗೂ ಪ್ರಮಾಣಪತ್ರ ನೀಡುತ್ತಿಲ್ಲ. ಕೋವಿಡ್‌ನಿಂದ ಗುಣಮುಖರಾದವರು ಕೋವಿಡ್ ದೃಢ ಪ್ರಮಾಣ ಪತ್ರದ ಜೊತೆಗೆ 7 ದಿನ ಮನೆ ಆರೈಕೆಯಲ್ಲಿದ್ದು ಚೇತರಿಸಿಕೊಂಡಿರುವ ಬಗ್ಗೆ ಖಾಸಗಿ ಸಂಸ್ಥೆಗಳಿಗೆ ಮಾಹಿತಿ ನೀಡಿದರೆ ಸಾಕು. ಅಗತ್ಯವಿದ್ದರೆ ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ’ ಎಂದರು.
‘ಮೃತಪಟ್ಟಿರುವ ಅನೇಕ ವ್ಯಕ್ತಿಗಳ ಮೊಬೈಲ್‌ಗೆ ಅವರು ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಸಂದೇಶಗಳನ್ನು ಕಳುಹಿಸಲಾಗಿದೆ. ಇದು ನಮ್ಮ ಗಮನಕ್ಕೂ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.