ADVERTISEMENT

ಹುಬ್ಬಳ್ಳಿ | ಆಂಬುಲೆನ್ಸ್‌ಗಾಗಿ 12 ಗಂಟೆ ಕಾಯ್ದ ಸೋಂಕಿತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 21:42 IST
Last Updated 4 ಜುಲೈ 2020, 21:42 IST
ಆಂಬುಲೆನ್ಸ್‌‌ (ಸಾಂದರ್ಭಿಕ ಚಿತ್ರ)
ಆಂಬುಲೆನ್ಸ್‌‌ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಆರೇಗೊಪ್ಪ ಗ್ರಾಮದ ಕೋವಿಡ್‌–19 ದೃಢಪಟ್ಟಿದ್ದ ವ್ಯಕ್ತಿಯೊಬ್ಬರುಮನೆಯಿಂದ ಕೋವಿಡ್‌ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್‌‌ಗಾಗಿ ಬರೋಬ್ಬರಿ 12 ಗಂಟೆ ಕಾದಿದ್ದಾರೆ.

ಗ್ರಾಮದ ಅರವತ್ತು ವರ್ಷದ ವೃದ್ಧೆಯೊಬ್ಬರಿಗೆಸೋಂಕು ದೃಢಪಟ್ಟ ಬಗ್ಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶಿರಸಿಯ ತಾಲ್ಲೂಕು ಆಸ್ಪತ್ರೆಯಿಂದ ಕರೆ ಬಂದಿತ್ತು. ಹಾವೇರಿ ಕೋವಿಡ್‌ ಆಸ್ಪತ್ರೆಗೆ ಹಲವಾರು ಬಾರಿ ಕರೆ ಮಾಡಿದರೂ ರಾತ್ರಿ 11.30ರ ಸುಮಾರಿಗೆ ಆಂಬುಲೆನ್ಸ್‌ ಬಂದು ಕರೆದೊಯ್ಯಿತು.

ವರನ ಕುಟುಂಬದ ವಿರುದ್ಧ ಪ್ರಕರಣ:ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರು ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 30ಕ್ಕೂ ಹೆಚ್ಚು ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ವರ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ಜಿಲ್ಲಾಡಳಿತ ಶನಿವಾರ ಪ್ರಕರಣ ದಾಖಲಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.