ADVERTISEMENT

ಕೊರೊನಾ: ಕಚೇರಿಯಲ್ಲಿಯೂ ಇರಲಿ ಎಚ್ಚರ, ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬಹುದು?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 18:43 IST
Last Updated 5 ಅಕ್ಟೋಬರ್ 2020, 18:43 IST
   

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರುಗತಿ ಪಡೆದಿರುವ ಪರಿಣಾಮ ಕಚೇರಿಗಳಲ್ಲಿಯೂ ಸೂಕ್ತಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಹಲವು ಉದ್ಯೋಗಿಗಳಿಗೆ ಈಗಾಗಲೇ ಮನೆಯಿಂದಲೇ ಕೆಲಸ ನಿರ್ವಹಿಸಲು ಕಂಪನಿಗಳು ಅವಕಾಶ ನೀಡಿವೆ. ಆದರೆ, ಕೆಲಸಗಳು ಸುಗಮವಾಗಿ ಸಾಗಲು ಬೇಕಾದ ಕನಿಷ್ಠ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲಾಖೆ ಕೆಲವು ಸೂಚನೆ ನೀಡಿದೆ.

- ಏಕಕಾಲಕ್ಕೆ ಇಬ್ಬರಿಗಿಂತ ಹೆಚ್ಚು ಜನ ಲಿಫ್ಟ್ ಬಳಸಬಾರದು.

ADVERTISEMENT

- ಲಿಫ್ಟ್‌ನಲ್ಲಿ, ಕಚೇರಿ ಒಳಗೆ ಅಂತರ ಕಾಯ್ದುಕೊಳ್ಳಬೇಕು

- ನಿರ್ದಿಷ್ಟ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಬೇಕು

- ಊಟ–ಉಪಾಹಾರದ ವೇಳೆಯೂ ಹೆಚ್ಚು ಜನ ಸೇರಬಾರದು

- ಹಸ್ತಲಾಘವ ಮಾಡಬಾರದು

- ಶೌಚಾಲಯ, ಕುಡಿಯುವ ನೀರಿನ ಸ್ಥಳ ಮತ್ತಿತರ ಅಗತ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು

- ಮೊಬೈಲ್‌, ಮೌಸ್‌ನಂತಹ ಉಪಕರಣವನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸಿಕೊಳ್ಳುತ್ತಿರಬೇಕು

- ಎ.ಸಿಗಳನ್ನು ಆದಷ್ಟು ಕಡಿಮೆ ಬಳಸಬೇಕು. ಶುದ್ಧ ಗಾಳಿ ಹರಿದಾಡಲು ವ್ಯವಸ್ಥೆ ಮಾಡಬೇಕು

- ಶೌಚಾಲಯದ ನಲ್ಲಿಗಳು, ಲಿಫ್ಟ್‌ ಬಟನ್‌ ಮತ್ತಿತರ ಜಾಗಗಳಲ್ಲಿ ಆಗಾಗ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು

- ಕಚೇರಿಯ ಒಳಗೆ ತರುವ ಸರಕುಗಳನ್ನು ಸ್ಯಾನಿಟೈಸ್‌ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.