ADVERTISEMENT

ಸಿಎಂ ಬಸ್‌ ತಡೆ: ಸಿಪಿಐ, ಪಿಎಸ್‌ಐ ಅಮಾನತು, 50 ಪ್ರತಿಭಟನಾಕಾರರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 14:22 IST
Last Updated 29 ಜೂನ್ 2019, 14:22 IST
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕರೇಗುಡ್ಡ ಕ್ರಾಸ್‌ನಲ್ಲಿ ಬಿಜೆಪಿ ಧ್ವಜ ಹಿಡಿದು ಮನವಿ ಸಲ್ಲಿಸಿದ ಗುಂಪಿನವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದರು.
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕರೇಗುಡ್ಡ ಕ್ರಾಸ್‌ನಲ್ಲಿ ಬಿಜೆಪಿ ಧ್ವಜ ಹಿಡಿದು ಮನವಿ ಸಲ್ಲಿಸಿದ ಗುಂಪಿನವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದರು.    

ರಾಯಚೂರು:ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಈಚೆಗೆ ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಅವರ ಬಸ್‌ ತಡೆದು ಪ್ರತಿಭಟನೆ ನಡೆಸಿದ 50 ಜನ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಭದ್ರತಾ ಲೋಪ’ದ ಕಾರಣಯರಗೇರಾ ವೃತ್ತದ ಇನ್‌ಸ್ಪೆಕ್ಟರ್‌ದತ್ತಾತ್ರೇಯ ಕಾರ್ನಾಡ ಮತ್ತು ರಾಯಚೂರು ಗ್ರಾಮೀಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ನಿಂಗಪ್ಪ ಅವರನ್ನು ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅಮಾನತುಗೊಳಿಸಿದ್ದಾರೆ.‌

ಮುಖ್ಯಮಂತ್ರಿ ತೆರಳುತ್ತಿದ್ದ ಸರ್ಕಾರಿ ಬಸ್‌ ಎದುರು ಪ್ರತಿಭಟನೆ ನಡೆಸಿದ್ದ 50 ಕಾರ್ಮಿಕರ ವಿರುದ್ಧವೂ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಯುಸಿಐ ಅಧ್ಯಕ್ಷ ಆರ್‌.ಮಾನಸಯ್ಯ, ಕಾರ್ಯದರ್ಶಿ ಜಿ.ಅಮರೇಶ ಸೇರಿದಂತೆ ಸದಸ್ಯರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕಾನೂನು ವಿರುದ್ಧ ಗುಂಪು ರಚನೆ, ದಂಗೆ, ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಎಲ್ಲರೂ ಭಾಗಿದಾರರು ಹಾಗೂ ಒಬ್ಬ ವ್ಯಕ್ತಿಗೆ ತಡೆಹಾಕಿದ ಆರೋಪದಡಿ ವಿವಿಧ ಸೆಕ್ಷೆನ್‌ ಅಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.