ADVERTISEMENT

ಮಕ್ಕಳ ಕಳ್ಳರೆಂದು ಭಾವಿಸಿ ಐವರಿಗೆ ಥಳಿತ

ಚಿನ್ನದ ಆಸೆಗೆ ಹಣವನ್ನೂ ಕಳೆದುಕೊಂಡು, ಹೊಡೆತ ತಿಂದು ಪೊಲೀಸರ ಅತಿಥಿಯಾದರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 13:40 IST
Last Updated 30 ಸೆಪ್ಟೆಂಬರ್ 2018, 13:40 IST

ಶಿವಮೊಗ್ಗ: ಚಿನ್ನದ ನಾಣ್ಯ ಪಡೆಯಲುಭಾನುವಾರ ಬೆಂಗಳೂರಿನಿಂದ ಬಂದಿದ್ದಐವರನ್ನುಮಕ್ಕಳ ಕಳ್ಳರು ಎಂದು ಭಾವಿಸಿದಕಲ್ಲಾಪುರ ಗ್ರಾಮಸ್ಥರು ದೇವಸ್ಥಾನದಲ್ಲಿ ಕಟ್ಟಿಹಾಕಿ, ಥಳಿಸಿದ ನಂತರಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಯಲಹಂಕದ ಸತೀಶ್, ಅವಿನಾಶ್, ಅಶೋಕ್, ಅಜಿತ್ ಹಾಗೂ ಮೂರ್ತಿ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದವರು.

ತಿಂಗಳ ಹಿಂದೆ ಕಲ್ಲಾಪುರದ ಮಂಜುನಾಥ್ ಧರ್ಮಸ್ಥಳಕ್ಕೆ ಹೋಗಿದ್ದಾಗ ಬೆಂಗಳೂರಿನ ಕಾರು ಚಾಲಕ ಅಶೋಕ್ ಅವರ ಪರಿಚಯವಾಗಿದೆ. ಪರಿಚಯದ ನಂತರ ನಿಯಮಿತವಾಗಿಕರೆ ಮಾಡುತ್ತಿದ್ದ ಮಂಜುನಾಥ್, ಒಂದು ದಿನ ತನ್ನ ಬಳಿಪುರಾತನ ಕಾಲದ ಚಿನ್ನದ ನಾಣ್ಯಗಳಿವೆ. ₨ 1 ಲಕ್ಷ ನೀಡಿದರೆ ಎಲ್ಲವನ್ನೂ ಕೊಡುವುದಾಗಿ ನಂಬಿಸಿದ್ದ. ಅದಕ್ಕೆ ಪೂರಕವಾಗಿ 9 ಗ್ರಾಂನ ಅಸಲಿ ಚಿನ್ನದ ನಾಣ್ಯ ಮುಂಗಡವಾಗಿ ನೀಡಿದ್ದ. ಅದನ್ನು ಪರೀಕ್ಷಿಸಿ ಅಸಲಿ ಎಂದು ಖಚಿತಪಡಿಸಿಕೊಂಡಿದ್ದ ಅಶೋಕ್ಹಣ ಹೊಂದಿಸಿಕೊಂಡು ತನ್ನ ನಾಲ್ವರು ಸ್ನೇಹಿತ ಜತೆ ಭಾನುವಾರ ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಿದ್ದಾರೆ.

ADVERTISEMENT

ಸಮೀಪದ ಕಲ್ಲಹಳ್ಳಿಗೆ ಕರೆಸಿಕೊಂಡ ಆರೋಪಿ ₨ 1 ಲಕ್ಷ ಪಡೆದುನಕಲಿಚಿನ್ನದನಾಣ್ಯ ನೀಡಿದ್ದಾನೆ. ನಾಣ್ಯಗಳಿಗೆ ಕುಂಕುಮ ಹತ್ತಿದೆ. ಸ್ವಚ್ಛಗೊಳಿಸಲು ಸಿರಿಂಜ್ ತನ್ನಿ ಎಂದು ಕಳುಹಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅವನ ಬೆನ್ನುಹತ್ತಿದ ಇವರನ್ನು ಹಿಡಿದ ಗ್ರಾಮಸ್ಥರು ಸಿರಿಂಜ್ ಇರುವುದನ್ನು ಗಮನಿಸಿ, ಮಕ್ಕಳಿಗೆ ಮತ್ತು ಭರಿಸುವ ಔಷಧ ನೀಡಿ, ಕಿಡ್ನಿ ಕಳವು ಮಾಡಲು ಬಂದಿದ್ದಾರೆ ಎಂದು ಭಾವಿಸಿ ಕಟ್ಟಿಹಾಕಿದ್ದಾರೆ.ಥಳಿಸಿದ ನಂತರ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲಿ ಸತ್ಯ ಸಂಗತಿ ಬೆಳೆಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.