ADVERTISEMENT

ರೈಲಿನಲ್ಲಿ ಸಿಕ್ಕಿದ್ದು ಚಿನ್ನದ ವ್ಯಾಪಾರಿಗೆ ಸೇರಿದ ಹಣ?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:17 IST
Last Updated 4 ನವೆಂಬರ್ 2018, 19:17 IST

ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶುಕ್ರವಾರ ವಶಪಡಿಸಿಕೊಂಡಿದ್ದ₹1.65 ಕೋಟಿ ನಗದು ಕೇರಳದ ಕಣ್ಣೂರು ಮೂಲದ ಚಿನ್ನದ ವ್ಯಾಪಾರಿ
ಯೊಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ಐಟಿ ಅಧಿಕಾರಿಗಳು ಹಣದ ಮೂಲದ ಕುರಿತು ವಿಚಾರಣೆ ಮುಂದುವರಿಸಿದ್ದಾರೆ.

ಚಿನ್ನದ ವ್ಯಾಪಾರ ನಡೆಸುತ್ತಿರುವ ಉದ್ಯಮಿ ಜಸ್ವಂತ್ ಸಿಂಗ್ ರಾಜ್ಯದ ಹಲವೆಡೆ ವ್ಯವಹಾರ ಹೊಂದಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರು ಎನ್ನಲಾಗಿದೆ. ಈಚೆಗೆ ರಾಜ್ಯದಲ್ಲಿ ಚಿನ್ನವನ್ನು ಮಾರಾಟ ಮಾಡಿ ಬಂದ ಹಣವನ್ನು ರೈಲಿನಲ್ಲಿ ಕಣ್ಣೂರಿಗೆ ಸಾಗಿಸುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಣಕ್ಕೆ ದಾಖಲೆಗಳು ಇರಲಿಲ್ಲ ಎನ್ನಲಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲ ಕುರಿತು ಜಸ್ವಂತ್ ಸಿಂಗ್, ಹಣ ಸಾಗಿಸುತ್ತಿದ್ದ ಪ್ರಕಾಶ್ ಹಾಗೂ ಗಣೇಶ್ ಎಂಬುವವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ರೈಲಿನಲ್ಲಿ ಹಿಂದೆ ಹಣ ಸಾಗಿಸಲಾಗುತ್ತಿತ್ತೆ ಹಾಗೂ ಹಣ ಸಾಗಣೆ ಜಾಲ ಎಲ್ಲಿಯವರೆಗೆ ವಿಸ್ತರಣೆಯಾಗಿದೆ ಎಂಬ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.