ADVERTISEMENT

ಉತ್ತರದ ನಾಲ್ಕು ‌ಜಿಲ್ಲೆಗಳಲ್ಲಿ ಅಂದಾಜು 6ರಿಂದ 7 ಲಕ್ಷ‌‌ ಹೆಕ್ಟರ್ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 8:59 IST
Last Updated 30 ಸೆಪ್ಟೆಂಬರ್ 2025, 8:59 IST
   

ಕಲಬುರಗಿ: 'ರಾಜ್ಯದಲ್ಲಿ ಮುಂಗಾರು ಮಳೆಯಿಂದ‌ ಸಂಭವಿಸಿದ ಅತಿವೃಷ್ಟಿಯಿಂದ ರಾಜ್ಯದಲ್ಲಿ ಪ್ರಾಥಮಿಕ ‌ವರದಿ‌ ಪ್ರಕಾರ 9 ಲಕ್ಷ ಹೆಕ್ಟೇರಗಳಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ. ಈ‌ ಭಾಗದ ನಾಲ್ಕು ಜಿಲ್ಲೆಗಳಲ್ಲೇ 6ರಿಂದ‌ 7 ಲಕ್ಷ ಹೆಕ್ಟರಗಳಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ ಎಂದು ಕೃಷಿ ಸಚಿವ‌ ಎನ್.ಚಲುವರಾಯಸ್ವಾಮಿ ಹೇಳಿದರು.

ಕಲಬುರಗಿ ತಾಲ್ಲೂಕಿನ ‌ಪಟ್ಟಣ ಗ್ರಾಮದ ಸರ್ವೇ ನಂಬರ್ 92/1ರಲ್ಲಿನ ರೈತ ಸೋಮಶೇಖರ್ ಪೊಲೀಸ್ ‌ಪಾಟೀಲ ಅವರ‌ ಐದು ಎಕರೆ‌ ತೊಗರಿ ಬೆಳೆ ಹಾನಿಯಾದ ಪ್ರದೇಶವನ್ನು ವೀಕ್ಷಿಸಿ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಕೃತಿ‌‌ ವಿಕೋಪ ಯಾರ ಕೈಯಲ್ಲೂ ಇಲ್ಲ. ಬೆಳೆ‌ವಿಮೆ ಮಾಡಿದವರಿಗೆ ಪರಿಹಾರ ಸಿಗಲಿದೆ. ಜೊತೆಗೆ ವಿಮೆ ಮಾಡಿಸದ‌ ರೈತರಿಗೂ ಸರ್ಕಾರದಿಂದ ಪರಿಹಾರ ‌ನೀಡುವ‌ ನಿಟ್ಟಿನಲ್ಲಿ ಮಧ್ಯಾಹ್ನ ಮುಖ್ಯಮಂತ್ರಿ ‌ಅವರೊಂದಿಗೆ ನಡೆಯುವ ಸಭೆಯ ಬಳಿಕ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.