ADVERTISEMENT

‘ಬೆಳೆದ ಬೆಳೆ ನಾಶಪಡಿಸಿದರೆ ಪರಿಹಾರವಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 18:34 IST
Last Updated 16 ಏಪ್ರಿಲ್ 2020, 18:34 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ದಾವಣಗೆರೆ/ಚಿತ್ರದುರ್ಗ: ಲಾಕ್‌ಡೌನ್‌ ಆರಂಭದಲ್ಲಿ ಕೃಷಿ ವಸ್ತುಗಳ ಮಾರಾಟಕ್ಕೆ ತೊಂದರೆಯಾಗಿತ್ತು. ಹಾಗಾಗಿ ರೈತರು ತಾವು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ. ಪ್ರಕೃತಿ ವಿಕೋಪದಿಂದ ನಾಶವಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಸ್ವತಃ ನಾಶ ಮಾಡಿದ ಬೆಳೆಗೆ ಪರಿಹಾರ ಸಿಗದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಸ್ಪಷ್ಟಪಡಿಸಿದರು.

ಏಪ್ರಿಲ್‌ 1ರಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ದಾವಣಗೆರೆಯಲ್ಲಿ ತಿಳಿಸಿದರು.

ಡಿಕೆಶಿಯಿಂದ ಲೂಟಿ

ADVERTISEMENT

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ’ ಎಂದು ಪಾಟೀಲ ಚಿತ್ರದುರ್ಗದಲ್ಲಿ ಆರೋಪಿಸಿದರು. ‘ಕೃಷಿ ಇಲಾಖೆ ಕೇವಲ ಘೋಷಣೆಗೆ ಸೀಮಿತ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಕ್ಕೆ ಅವರು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.