ADVERTISEMENT

ಬೆಳಗಾವಿ: ನರ್ತಿಸಿ ನೆರವು ಕೋರಿದ ಡ್ಯಾನ್ಸರ್‌ಗಳು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 13:49 IST
Last Updated 8 ಜೂನ್ 2020, 13:49 IST
ಬೆಳಗಾವಿಯಲ್ಲಿ ನೃತ್ಯ ತರಬೇತಿ ಕೇಂದ್ರಗಳ 3 ತಿಂಗಳ ಬಾಡಿಗೆ ಮನ್ನಾ ಮಾಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೃತ್ಯ ಮಾಡುತ್ತಾ ಪ್ರತಿಭಟಿಸಿದರು
ಬೆಳಗಾವಿಯಲ್ಲಿ ನೃತ್ಯ ತರಬೇತಿ ಕೇಂದ್ರಗಳ 3 ತಿಂಗಳ ಬಾಡಿಗೆ ಮನ್ನಾ ಮಾಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೃತ್ಯ ಮಾಡುತ್ತಾ ಪ್ರತಿಭಟಿಸಿದರು   

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ ಪರಿಣಾಮ ಗಳಿಕೆ ಇಲ್ಲದೆ ಕಂಗಾಲಾಗಿರುವ ನಮಗೆ ಸರ್ಕಾರದಿಂದ ನೆರವು ಕಲ್ಪಿಸಬೇಕು’ ಎಂದು ಆಗ್ರಹಿಸಿ ನೃತ್ಯಪಟುಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡ್ಯಾನ್ಸ್‌ ಮಾಡುತ್ತಾ ಸೋಮವಾರ ಪ್ರತಿಭಟನೆ ನಡೆಸಿದರು.

‘ಬೆಳಗಾವಿ ನೃತ್ಯ ತರಬೇತಿ ಶಿಕ್ಷಣ ಸಂಸ್ಥೆ’ ನೇತೃತ್ವದಲ್ಲಿ ಸೇರಿದ್ದ ಅವರು, ‘ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಘೋಷಿಸಲಾದ ಲಾಕ್‌ಡೌನ್‌ನಿಂದ ನಾವೂ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸಂಸ್ಥೆ ವತಿಯಿಂದ 43 ನೃತ್ಯ ತರಬೇತಿ ಕೇಂದ್ರಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಲಾಕ್‌ಡೌನ್‌ ವೇಳೆ ತರಬೇತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಬಾಡಿಗೆ ಪಾವತಿಸುವುದು ಸಾಧ್ಯವಾಗಿಲ್ಲ. ಆದರೆ, ಮಾಲೀಕರಿಂದ ಒತ್ತಡ ಬರುತ್ತಲೇ ಇದೆ’ ಎಂದು ತಿಳಿಸಿದರು.

‘3 ತಿಂಗಳವರೆಗಿನ ಬಾಡಿಗೆ ಮನ್ನಾ ಮಾಡುವಂತೆ ಮಾಲೀಕರಿಗೆ ಆದೇಶ ನೀಡಬೇಕು. ತರಬೇತಿ ಕೇಂದ್ರಗಳನ್ನು ಪುನರಾರಂಭಿಸಲು ಅವಕಾಶ ಕೊಡಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು. ಆಗ ಬಾಡಿಗೆ ಪಾವತಿಗೆ ಸಹಕಾರಿಯಾಗುತ್ತದೆ’ ಎಂದರು.

ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಸದಾನಂದ ಕಲ್ಪತ್ರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.