ಬೆಂಗಳೂರು: ಮೈಸೂರು ಸಮೀಪ ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟ ದರ್ಶನ್, ಆಸ್ಪತ್ರೆ ಸಮೀಪ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಆತಂಕ ಪಡುವಂತಥದ್ದು ತನಗೆ ಏನೂ ಆಗಿಲ್ಲ ಎಂದಿರುವ ದರ್ಶನ್, ‘ಯಾರೂ ಆಸ್ಪತ್ರೆ ಹತ್ತಿರ ಬರಬೇಡಿ ಪ್ಲೀಸ್’ ಎಂದು ಮನವಿ ಮಾಡಿರುವ ಆಡಿಯೊವನ್ನು ಡಿ ಕಂಪನಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿಕೊಂಡಿದೆ.
ದರ್ಶನ್ ಬಲಗೈ ಶಸ್ತ್ರಚಿಕಿತ್ಸೆ ನಡೆಸಿ 20ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಪ್ರಸ್ತುತ ತುರ್ತು ನಿಗಾ ಘಟಕದಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
‘ಎಲ್ಲರಿಗೂ ನಮಸ್ಕಾರ. ನನ್ನ ಅಭಿಮಾನಿಗಳು, ನನ್ನ ಅನ್ನದಾತರು ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನನಗೆ ಏನೂ ಆಗಿಲ್ಲ, ಆರಾಮಾಗಿರಿ. ಇನ್ನೊಂದು ದಿನ ಆಸ್ಪತ್ರೆಯಲ್ಲಿ ಇದ್ದು ನಾನೇ ಬರುತ್ತೇನೆ. ಆಮೇಲೆ ಎಲ್ಲರಿಗೂ ಸಿಗ್ತೀನಿ. ದಯವಿಟ್ಟು ಆಸ್ಪತ್ರೆ ಹತ್ತಿರ ಯಾರೂ ಬರಬೇಡಿ ಪ್ಲೀಸ್. ಇದೊಂದು ರಿಕ್ವೆಸ್ಟ್....ಬೇರೆ ಪೇಶೆಂಟ್ಸ್ ಇರ್ತಾರೆ ಅವರಿಗೂ ತೊಂದರೆ ಆಗುವುದು ಬೇಡ ಅಂತ. ಎಲ್ಲರೂ ಆರಾಮಾಗಿರಿ ನಿಮ್ಮ ದರ್ಶನ್‌ಗೆ ಏನೂ ಆಗಿಲ್ಲ..’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.