ADVERTISEMENT

ದಾವಣಗೆರೆ: ಖಾಸಗಿ ಲ್ಯಾಬ್ ತಪ್ಪು ವರದಿ, ತಾಯಿಯಿಂದ ಬೇರ್ಪಟ್ಟ ಮಗು ಸಾವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 11:24 IST
Last Updated 24 ಜೂನ್ 2020, 11:24 IST
ದಾವಣಗೆರೆಯಲ್ಲಿ ತಾಯಿಯಿಂದ ಬೇರ್ಪಟ್ಟ ನವಜಾತ ಶಿಶು ಸಾವು
ದಾವಣಗೆರೆಯಲ್ಲಿ ತಾಯಿಯಿಂದ ಬೇರ್ಪಟ್ಟ ನವಜಾತ ಶಿಶು ಸಾವು   

ದಾವಣಗೆರೆ: ಖಾಸಗಿ ಲ್ಯಾಬ್ ತಪ್ಪು ವರದಿ ಹಿನ್ನೆಲೆಯಲ್ಲಿ ತಾಯಿಯಿಂದ ಪ್ರತ್ಯೇಕವಾಗಿ ಇರಿಸಿದ್ದ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಯಿಗೆ ಮೊದಲು ಪಾಸಿಟಿವ್ ಎಂದು ಖಾಸಗಿ ಲ್ಯಾಬ್ ವರದಿ‌ ನೀಡಿತ್ತು. ನಂತರದ ಪರೀಕ್ಷೆ ವೇಳೆ ನೆಗೆಟಿವ್ ಎಂದು ಬಂದಿದೆ.
ಜೂನ್ 18 ರಂದು ಕೋವಿಡ್ ಆಸ್ಪತ್ರೆಯಲ್ಲಿ ನಾರ್ಮಲ್ ಡಿಲೆವರಿ ಆಗಿತ್ತು. ತಾಯಿಗೆ ಮೊದಲು ಪಾಸಿಟಿವ್ ಬಂದಿದೆ ಎಂಬ ವರದಿ ಹಿನ್ನೆಲೆ ಮಗುವನ್ಮು NICU ನಲ್ಲಿ ಪ್ರತ್ಯೇಕ ಇರಿಸಲಾಗಿತ್ತು.

ಈಗ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ. ಲ್ಯಾಬ್‌ನ ತಪ್ಪು ವರದಿಯಿಂದ ತಾಯಿ ಮಗುವನ್ನು ಪ್ರತ್ಯೇಕವಾಗಿ ಇರಿಸಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.