
ಪ್ರಜಾವಾಣಿ ವಾರ್ತೆ
ಕೆಇಎ
ಬೆಂಗಳೂರು: ಡಿಸಿಇಟಿ-2024ರ ಫಲಿತಾಂಶವನ್ನು ಇಂದು (ಜೂನ್ 29) ಮಧ್ಯಾಹ್ನ 2.00ರ ನಂತರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಡಿಪ್ಲೊಮ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಇರುವ ಮತ್ತು ಡಿಸಿಇಟಿ ಪರೀಕ್ಷೆಗೆ ಹಾಜರಾಗಿ ರ‍್ಯಾಂಕ್ ಪ್ರಕಟವಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಡಿಪ್ಲೊಮ ಅಂಕ ಮತ್ತು ಅಂಕಪಟ್ಟಿಗಳನ್ನು ಪಿಡಿಎಫ್ ಫಾರ್ಮಾಟ್ ನಲ್ಲಿ ಪ್ರಾಧಿಕಾರದ ಇಮೇಲ್ keaugcet 24@gmail.com ಸಲ್ಲಿಸಿದಲ್ಲಿ ಅರ್ಹತೆಯನ್ನು ಪರಿಶೀಲಿಸಿ ನಿಯಮಾನುಸಾರ ರ‍್ಯಾಂಕ್ ನೀಡಲಾಗುವುದು ಎಂದು ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.