ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹೋದರ ನಿಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 17:53 IST
Last Updated 10 ಸೆಪ್ಟೆಂಬರ್ 2018, 17:53 IST
ಸಿದ್ದನಗೌಡ ಪಾಟೀಲ
ಸಿದ್ದನಗೌಡ ಪಾಟೀಲ   

ಬೆಂಗಳೂರು:ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹೋದರ ಸಿದ್ದನಗೌಡ ಪಾಟೀಲ (51) ಸೋಮವಾರ ನಿಧನರಾದರು.

ಬೆಳಿಗ್ಗೆಯಿಂದಸಿದ್ದನಗೌಡ ಅವರು ತೀವ್ರ ಎದೆ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ವರ್ಷವಷ್ಟೇ ಬಸನಗೌಡ ಅವರ ಮತ್ತೊಬ್ಬ ಸಹೋದರ ಮೃತಪಟ್ಟಿದ್ದರು.ಮಂಗಳವಾರ ಯತ್ನಾಳ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.