ADVERTISEMENT

‘ಎನ್‌ಇಪಿ ತಿರಸ್ಕರಿಸಲು ನಿರ್ಣಯ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 19:31 IST
Last Updated 13 ಸೆಪ್ಟೆಂಬರ್ 2020, 19:31 IST

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಿರಸ್ಕರಿಸುವ ನಿರ್ಣಯವನ್ನು ಗಾಂಧಿ ವಿಚಾರ ಪರಿಷತ್‌ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ತೆಗೆದುಕೊಳ್ಳಲಾಯಿತು.

‘ಎನ್‌ಇಪಿ, ಜನಸಾಮಾನ್ಯರ ಬದಲು ಕಾರ್ಪೊರೇಟ್ ವಲಯದ ಒಳಿತು ಬಯಸುತ್ತಿದೆ. ಶಿಕ್ಷಣ ಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ಸ್ಪಷ್ಟತೆ ಹಾಗೂ ಅಗತ್ಯ ಮುನ್ನೋಟಗಳನ್ನು ಇದು ಒಳಗೊಂಡಿಲ್ಲ. ಹಲವು ವೈರುಧ್ಯಗಳಿರುವ ಈ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕೆಂದು ಸಭೆ ಒತ್ತಾಯಿಸುತ್ತದೆ’ ಎಂದು ಗಾಂಧಿ ವಿಚಾರ ಪರಿಷತ್‌ ಅಧ್ಯಕ್ಷ ಪ.ಮಲ್ಲೇಶ್‌ ನಿರ್ಣಯ ಪ್ರಕಟಿಸಿದರು.

‘ಹೊಸ ನೀತಿ ಸಮಾನತೆಯನ್ನು ತರುವ ಯಾವುದೇ ಧ್ಯೇಯ ಹೊಂದಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ನಡೆಯಬೇಕಾದ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ವಹಿಸುವ ಹುನ್ನಾರ ಇದೆ. ಈ ನೀತಿಯಲ್ಲಿ ಸಮಾಜವಾದಿ, ಜಾತ್ಯತೀತ ಧ್ಯೇಯದ ಸಂವಿಧಾನದ ಪ್ರಧಾನ ಆಶಯಗಳಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.