ADVERTISEMENT

ಅವಧಿ ಮುಗಿದ 16 ಟೋಲ್‌ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:40 IST
Last Updated 27 ನವೆಂಬರ್ 2022, 20:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ದಾವಣಗೆರೆ: ರಾಜ್ಯದಾದ್ಯಂತ ವಿವಿಧ ಹೆದ್ದಾರಿಗಳಲ್ಲಿ ಇರುವ 42 ಟೋಲ್‌ಗೇಟ್‌ಗಳ ಪೈಕಿ 16 ಟೋಲ್‌ಗೇಟ್‌ಗಳ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ಆಗ್ರಹಿಸಿದರು.

ಭಾನುವಾರ ಇಲ್ಲಿ ನಡೆದ ಲಾರಿ ಮಾಲೀಕರರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿಯ ಟೋಲ್‌ಗೇಟ್‌ ಸಹಿತ 16 ಟೋಲ್‌ಗೇಟ್‌ಅವಧಿ ಮುಗಿದಿದೆ. ಹೆದ್ದಾರಿ ನಿರ್ಮಾಣಕ್ಕೆ ಖರ್ಚು ಮಾಡಿದ ಹತ್ತುಪಟ್ಟು ಹಣ ವಸೂಲಾಗಿದೆ ಎಂದು ಹೇಳಿದರು.

ADVERTISEMENT

ಚಿತ್ರದುರ್ಗ–ಹೊಸಪೇಟೆ ನಡುವಿನ ಹೆದ್ದಾರಿಯಲ್ಲಿ 30 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮೂರುಟೋಲ್‌ಗೇಟ್‌ಗಳಿವೆ. ಒಂದು ಟೋಲ್‌ಗೇಟ್‌ ಇಟ್ಟುಕೊಂಡು ಎರಡನ್ನು ರದ್ದು ಮಾಡಬೇಕು. ಎಲ್ಲ ಟೋಲ್‌ಗೇಟ್‌ಗಳಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಸರಕು ಸಾಗಣೆ ಮಾಡುವಾಗಸುಂಕ ವಸೂಲಿ ಮಾಡಬಾರದು. ಸರಕು ಅನ್‌ಲೋಡ್‌ ಮಾಡಿ ವಾಪಸ್‌ ಖಾಲಿ ಬರುವ ಲಾರಿಗಳಿಗೆ ಟೋಲ್‌ ವಿಧಿಸಬಾರದು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.