ADVERTISEMENT

ಸಿಇಟಿ ಪರೀಕ್ಷೆ: ಏ.18 ಬದಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 23:00 IST
Last Updated 11 ಮಾರ್ಚ್ 2025, 23:00 IST
<div class="paragraphs"><p>ಐವನ್ ಡಿಸೋಜ </p></div>

ಐವನ್ ಡಿಸೋಜ

   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏ.16, 17, 18ರಂದು ಸಿಇಟಿ ನಡೆಯುತ್ತಿದ್ದು, ಕ್ರೈಸ್ತ ವಿದ್ಯಾರ್ಥಿಗಳ ಅನುಕೂಲಕ್ಕೆ ಏ.18ರಂದು ನಿಗದಿ ಆಗಿರುವ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕಾಂಗ್ರೆಸ್‌ನ ಐವನ್ ಡಿಸೋಜ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಏ. 18ರಂದು ಗುಡ್‌ಫ್ರೈಡೇ ಇದೆ. ಗುಡ್‌ಫ್ರೈಡೇ ಸರ್ಕಾರಿ ರಜಾದಿನ ಎಂದು ತಿಳಿದಿದ್ದರೂ ಅಧಿಕಾರಿಗಳು ಅಂದೇ ಪರೀಕ್ಷೆ ನಿಗದಿ ಮಾಡಿದ್ದಾರೆ. ಹಾಗಾಗಿ, ಪರೀಕ್ಷೆ ಮುಂದೂಡಬೇಕು ಎಂದರು.

ADVERTISEMENT

ಏ. 18ರಂದು ಗಡಿನಾಡು-ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ಇದೆ. 2,537 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 115 ಕ್ರೈಸ್ತ ವಿದ್ಯಾರ್ಥಿಗಳು ಇದ್ದಾರೆ. ದ್ವಿತೀಯ ಪಿಯು ಪರೀಕ್ಷೆ ಮಾರ್ಚ್‌ 20ರಂದು ಮುಕ್ತಾಯವಾಗಲಿದೆ. ಮೇ 4ರಂದು ನೀಟ್‌ ಇರುತ್ತದೆ. ಹಾಗಾಗಿ, ಮುಂದೂಡಲಾಗಲ್ಲ ಎಂದು ಈ ಹಿಂದೆ ಕೆಇಎ ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.