ADVERTISEMENT

ಪೀಠಾಧಿಪತಿಯಾಗಿ ಪಟ್ಟಕ್ಕೇರಿದ ದಿವಾನ್ ಶರೀಫ್‌ ಮುಲ್ಲಾ

ಖಜೂರಿ ಕೋರಣೇಶ್ವರ ಶಾಖಾ ಮಠ: ಲಿಂಗದೀಕ್ಷೆ ಪಡೆದ ಮುಸ್ಲಿಂ ಯುವಕನಿಗೆ ಪಟ್ಟಾಧಿಕಾರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST
ದಿವಾನ್ ಶರೀಫ್ ಮುಲ್ಲಾ (ಬಲದಿಂದ ಎರಡನೆಯವರು) ಅವರ ಪಟ್ಟಾಧಿಕಾರ ಮಹೋತ್ಸವ ಬುಧವಾರ ರೋಣ ತಾಲ್ಲೂಕಿನ ಅಸೂಟಿ ಗ್ರಾಮದಲ್ಲಿ ನಡೆಯಿತು. ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶ್ರೀ, ನರೇಂದ್ರಮೂರ್ತಿ ನೀಲವಚನ ತಾಯಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಕಮತಗಿಯ ಶಿವಕುಮಾರ ಸ್ವಾಮೀಜಿ, ಜೀಗೇರಿಯ ಸಿದ್ದೇಶ್ವರ ಸ್ವಾಮೀಜಿ, ರೋಣದ ವಿಶ್ವನಾಥ ದೇವರು ಇದ್ದಾರೆ.

ರೋಣ(ಗದಗ ಜಿಲ್ಲೆ): ಬಸವ ತತ್ವಕ್ಕೆ ಮಾರುಹೋಗಿ, ಲಿಂಗದೀಕ್ಷೆ ಪಡೆದುಕೊಂಡಿದ್ದ ತಾಲ್ಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕ ದಿವಾನ್ ಶರೀಫ್‌ ಮುಲ್ಲಾ ಬುಧವಾರ ಇಲ್ಲಿ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿಪಟ್ಟಕ್ಕೇರಿದರು.

ಈ ಸಂದರ್ಭದಲ್ಲಿಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ಹಸಮಣೆ ಏರಿದರು.

ಅಸೂಟಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ, ಮಠಕ್ಕೆ ಸೇರಿದ ಶಾಂತಿಧಾಮದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರಶ್ರೀಗಳು ಪಟ್ಟಾಧಿಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು.

ADVERTISEMENT

ಇಲ್ಲಿ ಎರಡು ಎಕರೆ ಜಾಗದಲ್ಲಿ ಕೋರಣೇಶ್ವರ ಶಾಖಾ ಮಠ ‘ಶಾಂತಿಧಾಮ’ ನಿರ್ಮಾಣಗೊಳ್ಳುತ್ತಿದ್ದು, ದಿವಾನ್ ಶರೀಫ್‌ ಸ್ವಾಮೀಜಿ ಅವರು ಈ ಪೀಠದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.