ADVERTISEMENT

ಧಾರವಾಡ ಕ್ಷೇತ್ರ ಮರಳಿಪಡೆಯಲು ಕಾಂಗ್ರೆಸ್‌ ತವಕ

ಧಾರವಾಡ ಲೋಕದರ್ಶನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:54 IST
Last Updated 10 ಮಾರ್ಚ್ 2019, 19:54 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಒಂದೊಂದು ಬಾರಿ ಒಂದೊಂದು ‘ಅಲೆ’ಯಲ್ಲಿ ತೇಲಿದ ಬಿಜೆಪಿಯ ಪ್ರಹ್ಲಾದ ಜೋಶಿ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. ಈ ಬಾರಿಯೂ ಅವರೇ ಅಭ್ಯರ್ಥಿ. ಮತ್ತೊಂದು ಅದೃಷ್ಟ ಅಂದ್ರೆ ಅವರ ವಿರುದ್ಧ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಇಲ್ಲದಿರುವುದು!

1991ರ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ನಂತರ ಕಳೆದ ಆರು ಚುನಾವಣೆಗಳಿಂದ ಬಿಜೆಪಿ ಅಭ್ಯರ್ಥಿಗಳೇ ಇಲ್ಲಿ ಗೆದ್ದಿದ್ದಾರೆ. ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್‌ ತಯಾರಿ ನಡೆಸಿದೆ. ಆದರೆ, ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಅದೇ ಗೊಂದಲ– ಗೋಜಲು. ಜೆಡಿಎಸ್‌ ಕೂಡ ಶಕ್ತಿ ಇಲ್ಲದೆ ಕಂಗಾಲಾಗಿದೆ.

***

ADVERTISEMENT

ಆಕಾಂಕ್ಷಿಗಳು

ಬಿಜೆಪಿ: ಪ್ರಹ್ಲಾದ ಜೋಶಿ
ಕಾಂಗ್ರೆಸ್‌; ವಿನಯ ಕುಲಕರ್ಣಿ, ಎ.ಎಂ.ಹಿಂಡಸಗೇರಿ, ಅನಿಲ ಪಾಟೀಲ, ಸದಾನಂದ ಡಂಗನವರ

ಜೆಡಿಎಸ್‌: ಎನ್‌.ಎಚ್.ಕೋನರಡ್ಡಿ

ಮತದಾರರ ಸಂಖ್ಯೆ: 16,88,067

ವಿಧಾನಸಭಾ ಕ್ಷೇತ್ರವಾರು ಬಲಾಬಲ
ಒಟ್ಟು–8

ಬಿಜೆಪಿ–6; ನವಲಗುಂದ, ಧಾರವಾಡ, ಹುಬ್ಬಳ್ಳಿ–ಧಾರವಾಡ ಪಶ್ಚಿಮ, ಹುಬ್ಬಳ್ಳಿ– ಧಾರವಾಡ ಕೇಂದ್ರ, ಕಲಘಟಗಿ, ಶಿಗ್ಗಾವಿ (ಹಾವೇರಿ ಜಿಲ್ಲೆ)

ಕಾಂಗ್ರೆಸ್–2; ಕುಂದಗೋಳ, ಹುಬ್ಬಳ್ಳಿ ಧಾರವಾಡ ಪೂರ್ವ

***

ಹಿಂದಿನ ಚುನಾವಣೆಗಳ ಲೆಕ್ಕಾಚಾರ

2009

ವಿಜೇತರು: ಪ್ರಹ್ಲಾದ ಜೋಶಿ, ಗೆಲುವಿನ ಅಂತರ: 1,37,663
ಪ್ರಹ್ಲಾದ ಜೋಶಿ: ಬಿಜೆಪಿ: ಶೇ 55.97

ಮಂಜುನಾಥ ಕುನ್ನೂರ: ಕಾಂಗ್ರೆಸ್; ಶೇ 38.73

ಮಹೇಶ ತಲಕಾಲಮಠ: ಎನ್‌ಸಿಪಿ: ಶೇ 0.90

ಇತರೆ; ಶೇ 4.4

2014

ವಿಜೇತರು: ಪ್ರಹ್ಲಾದ ಜೋಶಿ, ಗೆಲುವಿನ ಅಂತರ: 1,11,657

ಪ್ರಹ್ಲಾದ ಜೋಶಿ; ಬಿಜೆಪಿ: ಶೇ 52.19

ವಿನಯ ಕುಲಕರ್ಣಿ; ಕಾಂಗ್ರೆಸ್: ಶೇ 41.46

ಬಂಕಾಪುರ ಮಲ್ಲಪ್ಪ: ಜೆಡಿಎಸ್‌: ಶೇ 0.85

ಇತರೆ:ಶೇ 5.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.