ADVERTISEMENT

ಸಂಪುಟ ಪುನರ್‌ರಚನೆ ವೇಳೆ ಮತ್ತಷ್ಟು ನಾಯಕರಿಗೆ ಅವಕಾಶ: ದಿನೇಶ್‌ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 5:12 IST
Last Updated 7 ಜೂನ್ 2019, 5:12 IST
   

ಬೆಂಗಳೂರು: ರೋಷನ್ ಬೇಗ್ ಅವರು ಪಕ್ಷದ ಶಿಸ್ತು ಉಲ್ಲಂಘಿಸುವ ಹೇಳಿಕೆಗಳನ್ನುಅನೇಕ ಬಾರಿ ನೀಡಿದ್ದಾರೆ. ಬೇಗ್ ಎಐಸಿಸಿ ಸದಸ್ಯರೂ ಆಗಿರುವುದರಿಂದ ಈ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಗಂಡೂರಾವ್‌, ಬೇಗ್‌ ಅವರುಪಕ್ಷದ ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ. ಹಿರಿಯ ನಾಯಕರು ಮಂತ್ರಿ ಸ್ಥಾನವನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವಂತಹ ಗಂಭೀರ ಆರೋಪವನ್ನೂ ಮಾಡಿದ್ದಾರೆ ಈ ಬಗ್ಗೆ ಎಐಸಿಸಿ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಹಿರಿಯ ನಾಯಕರನ್ನು ಕಡೆಗಣಿಸಿಲ್ಲ ಎಂದ ಗುಂಡೂರಾವ್, ಮಂತ್ರಿ ಮಂಡಲ ಪುನರಚನೆಯಾದರೆ ರಾಮಲಿಂಗ ರೆಡ್ಡಿ ಸೇರಿದಂತೆ ಅಮರೇಗೌಡ ಬಯ್ಯಾಪೂರ, ವಿ.ಮುನಿಯಪ್ಪ ಅವರಿಗೂ ಅವಕಾಶ ಸಿಗಲಿದೆ. ಪಕ್ಷ ಯಾರೊಬ್ಬರ ಮುಷ್ಠಯಲ್ಲಿಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿಯೇ ಪ್ರತಿಯೊಂದು ತೀರ್ಮಾವ ಕೈಗೊಳ್ಳಲಾಗುವುದು ಎಂದುಸ್ಪಷ್ಟ ಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.