ADVERTISEMENT

ಡಿ.ಕೆ.ಶಿವಕುಮಾರ್ ಸ್ವಾಗತಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 6:14 IST
Last Updated 26 ಅಕ್ಟೋಬರ್ 2019, 6:14 IST
   

ಬೆಂಗಳೂರು:ಜಾರಿ ನಿರ್ದೇಶನಾಲಯದ ವಿಚಾರಣೆಗಾಗಿ 50 ದಿನ ದೆಹಲಿಯಲ್ಲಿ ಬಂಧನದಲ್ಲಿದ್ದ ಶಾಸಕ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮಧ್ಯಾಹ್ನ 2.30ರ ವೇಳೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬರಲಿದ್ದು, ಅವರ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.

ವಿಮಾನನಿಲ್ದಾಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 5 ಸಾವಿರಕ್ಕೂ ಅಧಿಕ ನಂದಿ ದೇವನಹಳ್ಳಿ ವಿಮಾನನಿಲ್ದಾಣದತ್ತ ಹೊರಟಿದ್ದಾರೆ.

ADVERTISEMENT

ವಿಮಾನನಿಲ್ದಾಣದಿಂದ ಕೆಪಿಸಿಸಿ ಕಚೇರಿ ವರೆಗೆ ಭವ್ಯ ಮೆರವಣೆಗೆ ನಡೆಸಲು ಸಿದ್ಧತೆ ನಡೆದಿದ್ದು, ಸಾವಿರಾರು ಮಂದಿ ಬೈಕ್ ಜಾಥಾ ಮೂಲಕ ಡಿಕೆಶಿ ಅವರಿಗೆ ಸ್ವಾಗತ ಕೋರುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಗೈರು:
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಗೆ ತೆರಳಿದ್ದು, ಡಿಕೆಶಿ ಸ್ವಾಗತಕ್ಕೆ ಗೈರು ಆಗಲಿದ್ದಾರೆ.

5 ಕಡೆ ಸ್ವಾಗತಸಿದ್ಧತೆ

ಸಾದಹಳ್ಳಿ ಗೇಟ್ಯಲಹಂಕ,ಎಸ್ಟೀಮ್ ಮಾಲ್ಹೆಬ್ಬಾಳ,ಜೆ.ಸಿ.ವೃತ್ತಹೀಗೆ ಐದು ಕಡೆಗಳಲ್ಲಿ ತೆರೆದ ವಾಹನಗಳ ಮೇಲೆ ನಿಂತು ಡಿಕೆಶಿ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಡೊಳ್ಳುಕುಣಿತ, ಪೂಜಾಕುಣಿತ ಸಹಿತ ಹಲವು ಕಲಾ ತಂಡಗಳು ಇದೀಗ ಸಾದಹಳ್ಳಿ ಗೇಟ್ ಬಳಿ ಬಂದಿವೆ. ಉಳಿದ ಕಡೆಗಳಲ್ಲಿ ಸಹ ಡಿಕೆಶಿ ಅವರಿಗೆ ಭವ್ಯಸ್ವಾಗತ ನೀಡಲು ಕಾರ್ಯ ಕರ್ತರು ತಯಾರು ನಡೆಸಿದ್ದಾರೆ.

ಡಿಕೆಶಿ ಅವರು ವಿಮಾನನಿಲ್ದಾಣ ಕ್ಕೆ ಬಂದಿಳಿಯುವ ಸಮಯದಲ್ಲಿ ಕನಕಪುರದ ಕಬ್ಬಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.