ಡಿ.ಕೆ ಶಿವಕುಮಾರ್
- ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಗುತ್ತಿಗೆದಾರರ ಬಾಕಿ ಮೊತ್ತ (ಬಿಲ್) ಪಾವತಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಸಚಿವರಾದ ಸತೀಶ ಜಾರಕಿಹೊಳಿ, ಎಸ್.ಎನ್. ಬೋಸರಾಜು ಭಾಗಿಯಾಗಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಬಾಕಿ ಪಾವತಿ ವಿಚಾರವಾಗಿ ಗುತ್ತಿಗೆದಾರರು ಸಚಿವರನ್ನು ಏಕೆ ಪ್ರಶ್ನಿಸಬೇಕು? ಇಲಾಖೆಯ ಬಜೆಟ್‌ನ ಅರಿವಿರಲಿಲ್ಲವೇ? ಅನುದಾನ ಬಿಡುಗಡೆಯಾಗದೆ ಇದ್ದಾಗಲೂ ಅವರು ಗುತ್ತಿಗೆ ಹೇಗೆ ಪಡೆದರು. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಜಲಸಂಪನ್ಮೂಲ ಇಲಾಖೆಯಲ್ಲೇ ₹1 ಲಕ್ಷ ಕೋಟಿಗೂ ಅಧಿಕ ಮೊತ್ತದ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ಬಿಲ್ ಪಾವತಿಗೆ ಶಾಸಕರ ಮೂಲಕ ಒತ್ತಡ ತರುತ್ತಿದ್ದಾರೆ’ ಎಂದರು
‘ವಿಧಾನಸಭೆ ಚುನಾವಣೆಗೂ ಒಂದು ವರ್ಷ ಮುಂಚಿತವಾಗಿ ಗುತ್ತಿಗೆದಾರರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿತ್ತು. ಅನುದಾನ ಇಲ್ಲದೆ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ವಿನಂತಿಸಿದ್ದೆವು. ಆದರೂ, ಮಾತು ಕೇಳಲಿಲ್ಲ. ಈಗ ಬಿಜೆಪಿ ನಾಯಕರ ಸೂಚನೆಯಂತೆ ಪತ್ರ ಬರೆಯುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.