ಡಿಕೆಶಿ
‘ಹೆಸರು ಸಂಪಾದನೆಗೆ ನಾನು, ನನ್ನ ಪಕ್ಷದವರು ಆಲೋಚಿಸುತ್ತೇವೆ. ಲಾಭದ ಬಗ್ಗೆ ಯೋಜನೆ ಮಾಡುವವನು ನೀನು’ ಎಂದು ಬಿಜೆಪಿಯ ಸಿ.ಟಿ. ರವಿ ಅವರಿಗೆ ಕುಟುಕಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ರಾಜ್ಯ ಹಾಗೂ ನಗರದಲ್ಲಿ ನನ್ನದೇ ಆದ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ತೀರ್ಮಾನಿಸಿದ್ದೇನೆ’ ಎಂದರು.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಸಮಯದಲ್ಲಿ ಬೆಂಗಳೂರಿನ ಸುರಂಗ ರಸ್ತೆ ಯೋಜನೆ ಪ್ರಸ್ತಾಪವಾಗುತ್ತಿದ್ದ ಸಂದರ್ಭದಲ್ಲಿ, ‘ಯೋಜನೆ ಪಾರದರ್ಶಕವಾಗಿರಲಿ. ಏಕೆಂದರೆ ಲಾಭ ಇಲ್ಲದೆ ಡಿ.ಕೆ. ಶಿವಕುಮಾರ್ ಅವರು ಏನು ಮಾಡುವುದಿಲ್ಲ ಎಂಬ ಭಾವನೆ ಎಲ್ಲರಲ್ಲಿದೆ’ ಎಂದರು ಸಿ.ಟಿ. ರವಿ.
‘ಕೆಲವು ಸಂಸದರು ನನ್ನ ಮೇಲೆ ಆರೋಪ ಮಾಡಿ, ನಾನು ದುಡ್ಡು ಹೊಡೆಯಲು ಈ ಯೋಜನೆ ಮಾಡುತ್ತಿದ್ದೇನೆ ಎಂದು ಟೀಕೆ ಮಾಡಿದ್ದಾರೆ. ನಾನು ಇಲ್ಲಿ ವ್ಯವಹಾರ ನೋಡುತ್ತಿಲ್ಲ. ನಾನು ಬೆಂಗಳೂರಿನ ಮೇಲೆ ಬಹಳ ಆಸಕ್ತಿ ಹೊಂದಿದ್ದೇನೆ. ಯೋಜನೆಯಲ್ಲಿ ಯಾವುದೇ ಲೋಪ, ಭ್ರಷ್ಟಾಚಾರ ಇದ್ದರೆ, ಯಾವುದೇ ತನಿಖೆಗೂ ಸಿದ್ಧ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.