ಬೆಂಗಳೂರು: ‘ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯ
ವಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ’ ಎಂದು ಈ ಸಮುದಾಯಗಳಮುಖಂಡರು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಳಿ ದೂರಿದರು.
ಮಹಾಲಕ್ಷ್ಮಿಪುರದಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರ ನಿವಾಸದಲ್ಲಿ ಶನಿವಾರ ನಡೆದ ಹಿಂದುಳಿದ ಸಮುದಾಯದ ನಾಯಕರ ಉಪಾಹಾರ ಕೂಟದಲ್ಲಿ ಶಿವಕುಮಾರ್ ಭಾಗವಹಿಸಿದರು.
ಈ ವೇಳೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ನಾಯಕರು, ‘ಬಜೆಟ್‍ನಲ್ಲಿ ಸರ್ಕಾರ ಕಾಟಾಚಾರಕ್ಕೆ ಅನುದಾನ ನೀಡಿದೆ. ಯೋಜನಾ ವೆಚ್ಚಗಳನ್ನು ಬಿಟ್ಟು ಯೋಜನೇತರ ವೆಚ್ಚಗಳಿಗೆ ಹಣ ನೀಡಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.