ADVERTISEMENT

ಬಡವರ ಅಕ್ಕಿ ತಮಿಳುನಾಡು ಪಾಲು: ಡಿ.ಕೆ.ಶಿವಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 8:11 IST
Last Updated 24 ಏಪ್ರಿಲ್ 2020, 8:11 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೊರೊನಾ ಸೋಂಕು ವಿರುದ್ಧ ಹೋರಾಡುವಲ್ಲಿಯೂ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಬಡವರಿಗೆ ತಲುಪಬೇಕಾದ ಅಕ್ಕಿ ತಮಿಳುನಾಡಿನ ಪಾಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'ಸಿಎಂಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ನಾವು ತರಬೇಕಿದೆ. ಆಹಾರ ನಿರೀಕ್ಷಕರಿಗೆ ಒಂದು ಲೋಡ್ ಅಕ್ಕಿ ಕಳಿಸಲಾಗಿದೆ.ಬಡವರಿಗಾಗಿ ಕೊಡುವ ಅಕ್ಕಿ ತಮಿಳುನಾಡು ಪಾಲಾಗ್ತಿದೆ.ಹರಿಯಾಣದಿಂದ ಬಂದ ಅಕ್ಕಿಯನ್ನ ಮಾರಿಕೊಳ್ಳಲಾಗಿದೆ' ಎಂದರು.

'1879 ಕ್ವಿಂಟಲ್ ಅಕ್ಕಿ ಅಕ್ರಮವಾಗಿ ಮಾರಾಟವಾಗಿದೆ ತಮಿಳುನಾಡು ಗಡಿಗೆ ಸಾಗಿಸಲಾಗಿದೆ‌. ಬಿಜೆಪಿ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ‌ ತಮಿಳುನಾಡಿನ ಹೊಸೂರು ವ್ಯಾಪಾರಿಗೆ ಮಾರಿದ್ದಾರೆ‌ ಹರಿಯಾಣದ ಅಕ್ಕಿಯನ್ನ ನಾವು ಮುಟ್ಟುಗೋಲು ಹಾಕಿಸಿದ್ದೇವೆ.
ಸರ್ಜಾಪುರದ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹಿಸಿದ್ದಾರೆ.ಸಂಗ್ರಹ ಮಾಡಬೇಕಾದರೆ ತಹಶೀಲ್ದಾರ್ ಅನುಮತಿ ಬೇಕು, ಈಗ ತಹಶೀಲ್ದಾರ್‌ಗೆ ಧಮ್ಕಿ ಹಾಕ್ತಿದ್ದಾರೆ.

ADVERTISEMENT

ಬಿಜೆಪಿ ಮುಖಂಡ ಬುಲೆಟ್ ಬಾಬು ಗೋಡೌನ್ ಮಾಲೀಕ.ಸರ್ಕಾರದ ಸ್ವತ್ತಾಗಿದ್ದರೆ ಘೋಷಿಸಿಕೊಳ್ಳಬೇಕು. ಆದರೆ ಯಾವುದೇ ಅನುಮತಿಯಿಲ್ಲದೆ ಸಂಗ್ರಹಿಸಿದ್ದಾರೆ.ನಮ್ಮ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿದ್ದಾರೆ. ಆಹಾರ ಕಾಯ್ದೆ ಪ್ರಕಾರ ಇದರ ಬಗ್ಗೆ ಕಠಿಣ ಕ್ರಮತೆಗೆದುಕೊಳ್ಳಬೇಕು.ಬಿಜೆಪಿ ಮುಖಂಡನನ್ನು ಬಂಧಿಸಬೇಕು' ಎಂದು ಒತ್ತಾಯಿಸಿದರು.

'ಪ್ರತಿಯೊಂದು ಜಿಲ್ಲೆಯಲ್ಲೂ ಇದೇ ರೀತಿ ಅಕ್ರಮ ವ್ಯಾಪಾರವಾಗುತ್ತಿದೆ. ಅಕ್ಕಿಯನ್ನ ಪಾಲಿಶ್ ಮಾಡಿ ಕಳ್ಳ ಮಾರಾಟ ಮಾಡ್ತಿದ್ದಾರೆ. ಕಿಲೋಗೆ ₹ 30ರಿಂದ ₹40ರಂತೆ ಮಾರಾಟವಾಗುತ್ತಿದೆ.ಕೇಂದ್ರದಿಂದ ಉಚಿತವಾಗಿ ಬರುವ ಅಕ್ಕಿಯನ್ನು ಮಾರಾಟಮಾಡ್ತಿದ್ದಾರೆ
ನಿರ್ದಾಕ್ಷಿಣ್ಯವಾಗಿ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾವು ಈ ಹಗರಣವನ್ನು ದಾಖಲೆ ಸಮೇತ ಪತ್ತೆ ಹಚ್ಚಿದ್ದೇವೆ' ಎಂದರು

'ಬ್ಯಾಂಕುಗಳು ಇವತ್ತು ವಂಚನೆಮಾಡುತ್ತಿವೆ. ಕೈಗಾರಿಕೋದ್ಯಮಿಗಳಿಗೆ, ಅಕೌಂಟ್ ಇರುವವರಿಗೆ ವಂಚನೆ ಆಗುತ್ತಿದೆ.ಆರ್ ಬಿಐ ನಿಯಮಗಳನ್ನ ಬ್ಯಾಂಕುಗಳು ಉಲ್ಲಂಘಿಸುತ್ತಿವೆ.ಗ್ರಾಹಕರು, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳನ್ನ ವಂಚಿಸುತ್ತಿವೆ. ಮೂರು ತಿಂಗಳು ಯಾವುದೇ ಬಲವಂತ ಮಾಡುವಂತಿಲ್ಲ. ಆದರೆ ಈಗಲೇ ಗ್ರಾಹಕರ ಮೇಲೆ ಒತ್ತಡ ಹೆಚ್ಚುತ್ತಿದೆ. ಎಲ್ಲಾ ಬ್ಯಾಂಕುಗಳು ಆರ್ ಬಿ ನಿಯಮ ಕಡೆಗಣಿಸಿವೆ' ಎಂದು ದೂರಿದರು.

ಮಲ್ಲೇಶ್ವರದಲ್ಲೇ ಇಡಬಹುದಿತ್ತಲ್ಲ

ಪಾದರಾಯನಪುರದಲ್ಲಿ ಗಲಭೆ ಮಾಡಿದವರನ್ನು ಹಸಿರು ವಲಯ ರಾಮನಗರಕ್ಕೆ ಏಕೆ ತಂದರು? ಮಲ್ಲೇಶ್ವರದಲ್ಲೇ ಇಡಬಹುದಿತ್ತಲ್ಲಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

'ಈಗಾಗಲೇ ಈ ಬಗ್ಗೆ ಹೆಚ್‌.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಮಲ್ಲೇಶ್ವರಂ ಆಸ್ಪತ್ರೆಗೆ ಕೊರೊನಾ ಕೇಸ್ ಬಿಡ್ತಿಲ್ಲ. ನಮ್ಮ ಜಿಲ್ಲೆಗೆ ಯಾಕೆ ತಂದು ತುಂಬ್ತೀರ.ಜಿಲ್ಲೆಯ ಜನ ಅಲ್ಲಿಂದ ಶಿಫ್ಟ್ ಮಾಡಿಸಿ ಅಂತ ಒತ್ತಡ ತಂದಿದ್ದಾರೆ. ಬೇರೆ ಕಡೆ ಸಾಕಷ್ಟು ಸ್ಥಳಾವಕಾಶಗಳಿವೆ. ಅಲ್ಲಿ ಸೋಂಕು ಹರಡೋಕೆ ಯಾಕೆ ಕಾರಣರಾಗ್ತೀರ. ಅಲ್ಲಿನ ಡಿಸಿ, ಎಸ್ಪಿ ಯಾಕೆ ಅವಕಾಶ ನೀಡಿದ್ದರೋ ಗೊತ್ತಿಲ್ಲ' ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಡಿಸಿಎಂ ಬೇಕಾದರೆ ತಮ್ಮ ಮನೆಯಲ್ಲೇ ಸೋಂಕಿತರನ್ನ ಇಟ್ಟುಕೊಳ್ಳಲಿ. ಇಲ್ಲವೇ ಮಲ್ಲೇಶ್ವರಂಗೆ ಆದರೂ ಹಾಕಿಕೊಳ್ಳಲಿ. ನಮ್ಮಲ್ಲಿ ಯಾಕೆ ಇಡಬೇಕು ? ಡಿಸಿ‌ಎಂಗೆ ನಮ್ಮ‌ ಮೇಲೆ ಅದೇನು ಕೋಪ ಇದೆಯೋ ಗೊತ್ತಿಲ್ಲಎಚ್.‌ಡಿ ಕುಮಾರಸ್ವಾಮಿ ತಮ್ಮ ಪುತ್ರನ ಮದುವೆ ಮಾಡಿದ್ದಕ್ಕೆ ದೊಡ್ಡ ರಾದ್ಧಾಂತ ಮಾಡಿದ್ದರು ಎಂದು ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.