ಬೀದಿ ನಾಯಿ
(ಸಾಂದರ್ಭಿಕ ಚಿತ್ರ)
ಚಿಕ್ಕಬಳ್ಳಾಪುರ: ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಡೆಸುತ್ತಿದ್ದ ಶಿಕ್ಷಕಿ ಮೇಲೆ ಶನಿವಾರ ನಾಯಿ ದಾಳಿ ಮಾಡಿದೆ.
ಕೂತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರಂಜನಿ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ಸಮೀಕ್ಷೆ ನಡೆಸುತ್ತಿ ದ್ದರು. ಪಿಡಿಒ ನಾರಾಯಣಸ್ವಾಮಿ ಅವರ ಮನೆಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಹೊರ ಬರುವ ವೇಳೆ ಆ ಮನೆಯಲ್ಲಿದ್ದ ಜರ್ಮನ್ ಶೆಪರ್ಡ್ ನಾಯಿ ಕಾಲಿಗೆ ಕಚ್ಚಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದರು. ‘ನಾಯಿ ಕಚ್ಚುವುದಿಲ್ಲ ಎಂದು ಆ ಮನೆಯವರು ಹೇಳಿದ್ದರು. ಲಸಿಕೆ ಹಾಕಿಸಿದ್ದೇವೆ ಭಯಪಡಬೇಡಿ ಎಂದು ಅವರು ಹೇಳಿದರು. ಆದರೆ ನಮಗೂ ಭಯ’ ಎಂದು ರಂಜನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.