ADVERTISEMENT

ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 19:26 IST
Last Updated 19 ಜನವರಿ 2021, 19:26 IST
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖೆಗೆ ಸೇರ್ಪಡೆಯಾದ ಪುಟ್ಟ ನಾಯಿ ಮರಿ 'ಕ್ರಿಶ್' ನನ್ನು ಎಸ್ಪಿ ಲೋಕೇಶ ಜಗಲಾಸರ್ ಪ್ರದರ್ಶಿಸಿದರು
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖೆಗೆ ಸೇರ್ಪಡೆಯಾದ ಪುಟ್ಟ ನಾಯಿ ಮರಿ 'ಕ್ರಿಶ್' ನನ್ನು ಎಸ್ಪಿ ಲೋಕೇಶ ಜಗಲಾಸರ್ ಪ್ರದರ್ಶಿಸಿದರು   

ಬಾಗಲಕೋಟೆ: ಭಾರತೀಯ ಸೇನೆ, ಅರೆ ಸೇನಾ ಪಡೆಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಮುಧೋಳ ತಳಿಯ ಶ್ವಾನ ಇದೀಗ ಪೊಲೀಸ್ ಇಲಾಖೆಗೂ ಸೇರ್ಪಡೆಗೊಂಡಿದೆ.

‘ಇಲಾಖೆಯಲ್ಲಿ ಮುಧೋಳ ತಳಿಯ ನಾಯಿ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, ಜನವರಿ 19ರಂದು 'ಕ್ರಿಶ್' ಹೆಸರಿನ 1.5 ತಿಂಗಳ ನಾಯಿ ಮರಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಶ್ವಾನದಳದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಮುಧೋಳ ತಾಲ್ಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಅವರು ‘ಕ್ರಿಶ್’ ನನ್ನು ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಅವರಿಗೆ ಒಪ್ಪಿಸಿದರು.

ADVERTISEMENT

ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ಶ್ವಾನದಳದಲ್ಲಿ ಈ ತಳಿಯ ಕಾರ್ಯವೈಖರಿ ಗಮನಿಸಿ, ಇತರೆ ಜಿಲ್ಲೆಗಳಿಗೂ ನಿಯೋಜಿಸಲು ನಿರ್ಧರಿಸಿರುವ ಗೃಹ ಇಲಾಖೆ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆಗೆ ಅವಕಾಶ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.