ADVERTISEMENT

ಡಾರ್ಕ್‌ನೆಟ್ ಅಂತರ್ಜಾಲದ ಮೂಲಕ ಡ್ರಗ್ಸ್ ವ್ಯವಹಾರ: ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 8:13 IST
Last Updated 30 ಆಗಸ್ಟ್ 2020, 8:13 IST
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ಗಾಂಜಾ ಸರಬರಾಜು ಮಾಡುವವರನ್ನು ಮಾತ್ರ ಇಲ್ಲಿವರೆಗೆ ಬಂಧಿಸುತ್ತಿದ್ದೆವು. ಆದರೆ, ಡಾರ್ಕ್‌ನೆಟ್ ಅಂತರ್ಜಾಲ ಹಾಗೂ ಅಂಚೆ ಮೂಲಕವೂ ಈ ವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅದನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗದವರಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರದವರು ಸಹ ಒಳಗಾಗಗಿದ್ದಾರೆ. ಸದ್ಯ ನಾವು ಅದರ ಮೂಲ ಪತ್ತೆಹಚ್ಚುತ್ತಿದ್ದೇವೆ. ಎನ್‌ಸಿಬಿ ಅವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಶನಿವಾರ ಇಂದ್ರಜಿತ್‌ ಲಂಕೇಶ್ ಅವರಿಗೆ ನೋಟಿಸ್ ನೀಡಲಾಗಿದ್ದು, ಏನು ಉತ್ತರ ನೀಡುತ್ತಾರೆ ನೋಡೋಣ ಎಂದು ತಿಳಿಸಿದರು.

ಸಿಸಿಬಿ ಅಧಿಕಾರಿಗಳಿಗೆ ಕೂಲಂಕಷವಾಗಿ ತನಿಖೆ ನಡೆಸಲು ಸೂಚಿಸಿದ್ದೇವೆ. ಚಿತ್ರರಂಗವೇ ಇರಲಿ, ಇನ್ಯಾವುದೇ ಕ್ಷೇತ್ರವಿರಲಿ ಪ್ರಕರಣ ಭೇದಿಸುತ್ತೇವೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.