ADVERTISEMENT

ಗೌರಿ ಲಂಕೇಶ್‌ಗೆ ಪಾಕ್‌ನಿಂದ ಡ್ರಗ್ಸ್‌ ಬರುತ್ತಿತ್ತು: ಶ್ರೀರಾಮ ಸೇನೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:09 IST
Last Updated 9 ಸೆಪ್ಟೆಂಬರ್ 2020, 15:09 IST

ಯಾದಗಿರಿ: ‘ಪತ್ರಕರ್ತೆ ಗೌರಿ ಲಂಕೇಶ್ ಅವರು ಡ್ರಗ್ಸ್ತೆಗೆದುಕೊಳ್ಳುತ್ತಿದ್ದರು. ಅವರಿಗೆ ಪಾಕಿಸ್ತಾನದಿಂದ ಡ್ರಗ್ಸ್‌‌ ಸರಬರಾಜು ಆಗುತ್ತಿತ್ತು.ಈ ಬಗ್ಗೆ ನಾವು ಸಾಕ್ಷ್ಯ ‌ಸಂಗ್ರಹ ಮಾಡುತ್ತಿದ್ದೆವು. ಆದರೆ, ಅಷ್ಟೊತ್ತಿಗೆ ಅವರು ಮೃತಪಟ್ಟ ಕಾರಣ ಸುಮ್ಮನಾದೆವು’ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಇಂದ್ರಜಿತ್‌ ಹಾಗೂ ಗೌರಿ ಮಧ್ಯೆ ಮನಸ್ತಾಪವಿತ್ತು. ಇಂದ್ರಜಿತ್ ಲಂಕೇಶ್‌ಗೆ ಈಗ ಜ್ಞಾನೋದಯವಾಗಿದೆ. ಅವರು ಮೊದಲು ಮನೆ ಸರಿ ಮಾಡಿಕೊಳ್ಳಲಿ. ಆಮೇಲೆ ಸಮಾಜ ಸುಧಾರಣೆ ಮಾಡಲಿ’ ಎಂದರು.

‘ಮುಸ್ಲಿಂ ರಾಷ್ಟ್ರಗಳಿಂದ ಡ್ರಗ್ಸ್‌ ಸರಬರಾಜು ಆಗುತ್ತದೆ. ನಮ್ಮ ಯುವಕರನ್ನು ಹಾಳು ಮಾಡಲು ಪಾಕಿಸ್ತಾನದಿಂದ ಡ್ರಗ್ಸ್‌ ಜಿಹಾದ್ ನಡೆಯುತ್ತಿದೆ. ಹಣ ಸಂಪಾದನೆ ಮಾಡಿ ಭಾರತದ ವಿರುದ್ಧ ಸಮರ ಸಾರುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.