ADVERTISEMENT

ಉಗ್ರರ ಜತೆ ಸಂಪರ್ಕ ಶಂಕೆ: ತೀರ್ಥಹಳ್ಳಿಯಲ್ಲಿ ಮನೆಗಳ ಶೋಧ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 20:26 IST
Last Updated 10 ಮಾರ್ಚ್ 2021, 20:26 IST
ಉಗ್ರರ ಸಂಘಟನೆ ಜೊತೆ ಸಂಪರ್ಕ ಇದೆ ಎಂಬ ಶಂಕೆಯಿಂದ ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆ ಸಮೀಪ ಮಂಗಳವಾರ ರಾಷ್ಟ್ರೀಯ ತನಿಖಾ ದಳದ ಪೊಲೀಸರು ಶೋಧ ನಡೆಸಿದರು
ಉಗ್ರರ ಸಂಘಟನೆ ಜೊತೆ ಸಂಪರ್ಕ ಇದೆ ಎಂಬ ಶಂಕೆಯಿಂದ ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆ ಸಮೀಪ ಮಂಗಳವಾರ ರಾಷ್ಟ್ರೀಯ ತನಿಖಾ ದಳದ ಪೊಲೀಸರು ಶೋಧ ನಡೆಸಿದರು   

ತೀರ್ಥಹಳ್ಳಿ: ಉಗ್ರರ ಸಂಘಟನೆ ಜತೆ ಸಂಪರ್ಕ ಹೊಂದಿರಬಹುದು ಎಂಬ ಶಂಕೆಯಿಂದ ಮಂಗಳವಾರ ಪಟ್ಟಣದಲ್ಲಿ ರಾಷ್ಟ್ರೀಯ ತನಿಖಾ ದಳದ ಪೊಲೀಸರು ಇಬ್ಬರು ಯುವಕರ ಮನೆಗಳನ್ನು ಶೋಧಿಸಿ, ಪೋಷಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಪಟ್ಟಣದ ಮೀನು ಮಾರುಕಟ್ಟೆ ಸಮೀಪದ ಇಬ್ಬರು ಯುವಕರ ಮನೆಗೆ ಬೆಳಿಗ್ಗೆ 7ಕ್ಕೆ ಬಂದ ರಾಷ್ಟ್ರೀಯ ತನಿಖಾ ದಳದ ಪೊಲೀಸರು ತಪಾಸಣೆ ನಡೆಸಿ, ಪೋಷಕರ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ತನಿಖಾ ದಳದ ಪೊಲೀಸರು ಒಂದು ವರ್ಷದಿಂದ ತೀರ್ಥಹಳ್ಳಿಯ ಕೆಲವು ಪ್ರದೇಶಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಉಗ್ರರು ಬಳಸಿದ್ದ ಸ್ಯಾಟಲೈಟ್‌ ಫೋನ್‌ ನೆಟ್‌ವರ್ಕ್‌ ತೀರ್ಥಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು ಎಂದು ವರ್ಷದ ಹಿಂದೆಯೂ ತಪಾಸಣೆ ನಡೆಸಿದ್ದರು. ತಾಂತ್ರಿಕ ಪದವಿ ಪಡೆದು ಬೆಂಗಳೂರಿನಲ್ಲಿದ್ದ ಇಲ್ಲಿನ ಮಾಜಿ ಸೈನಿಕರೊಬ್ಬರ ಪುತ್ರ ಉಗ್ರರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ತನಿಖೆ ನಡೆದಿದೆ. ಯುವಕನ ಹತ್ತಿರದ ಸಂಬಂಧಿಯೊಬ್ಬ ಉಗ್ರರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾನೆ ಎಂಬ ಸುದ್ದಿಯೂ ಹಬ್ಬಿತ್ತು.

ADVERTISEMENT

ಪೊಲೀಸರೆದುರು ಕಣ್ಣೀರಿಟ್ಟ ಪೋಷಕರು: ಪೊಲೀಸರು ಮನೆಯ ತಪಾಸಣೆಗೆ ಬಂದಾಗ ಪೋಷಕರು ಕಣ್ಣೀರು ಹಾಕಿದರು. ಸುಮಾರು ಮೂರು ತಾಸು ತಪಾಸಣೆ ನಡೆಯಿತು. ಮನೆಯ ಸದಸ್ಯರು, ಅವರ ವೃತ್ತಿ ಕುರಿತು ವಿವರ ಪಡೆದರು ಎಂದು ಪ್ರತ್ಯಕ್ಷ್ಯದರ್ಶಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.