ADVERTISEMENT

ಶುಶೃತಿ ಬ್ಯಾಂಕ್ ಪ್ರಕರಣ: ₹3.62 ಕೋಟಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:48 IST
Last Updated 11 ಸೆಪ್ಟೆಂಬರ್ 2025, 16:48 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಬೆಂಗಳೂರು: ಠೇವಣಿದಾರರ ₹110 ಕೋಟಿ ವಂಚಿಸಿದ ಪ್ರಕರಣದಲ್ಲಿ ನಗರದ ಶುಶೃತಿ ಸೌಹಾರ್ದ ಬ್ಯಾಂಕ್‌ಗೆ ಸೇರಿದ ₹3.62 ಕೋಟಿ ಮೊತ್ತದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

‘ಬ್ಯಾಂಕ್‌ನ ಹಿಂದಿನ ಅಧ್ಯಕ್ಷ ಎನ್‌.ಶ್ರೀನಿವಾಸಮೂರ್ತಿ ಮತ್ತು ಅವರ ಆಪ್ತೆ ರತ್ನಮ್ಮ ಅವರ ಹೆಸರಿನಲ್ಲಿ ಇರುವ ಸ್ವತ್ತುಗಳು ಇದರಲ್ಲಿ ಸೇರಿದೆ’ ಎಂದು ಇ.ಡಿಯ ಪ್ರಕಟಣೆ ತಿಳಿಸಿದೆ.

ನಗರದ ವಿಲ್ಸನ್‌ಗಾರ್ಡನ್‌ ಮತ್ತು ಅಂದ್ರಹಳ್ಳಿಯ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌, ಮಾಗಡಿ ತಾಲ್ಲೂಕಿನ ಮೈಲನಹಳ್ಳಿಯ ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ನ ಠೇವಣಿದಾರರಿಗೆ ಅತಿ ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ, ₹200 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಲಾಗಿತ್ತು. ಆದರೆ 2021ರಿಂದ 2022ರ ಅವಧಿಯಲ್ಲಿ ಠೇವಣಿದಾರರಿಗೆ ಬಡ್ಡಿ ಪಾವತಿ ಮಾಡಿರಲಿಲ್ಲ ಎಂದು ಇ.ಡಿ ಹೇಳಿದೆ.

ADVERTISEMENT

ಹಿಂದಿನ ಅಧ್ಯಕ್ಷ ಎನ್‌.ಶ್ರೀನಿವಾಸಮೂರ್ತಿ, ನಿರ್ದೇಶಕಿ ಮತ್ತು ಶ್ರೀನಿವಾಸಮೂರ್ತಿ ಅವರ ಪತ್ನಿ ಧರಣಿದೇವಿ, ಕಾರ್ಯಕಾರಿ ನಿರ್ದೇಶಕಿ ಮೋಕ್ಷತಾರಾ, ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ನ ನಿರ್ದೇಶಕಿ ರತ್ನಮ್ಮ ಅವರು ಸಂಚು ರೂಪಿಸಿ, ವಂಚನೆ ಎಸಗಿದ್ದರು. ಠೇವಣಿದಾರರ ಹಣವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.