ADVERTISEMENT

ಪುತ್ತಿಲ ಸಹಿತ 8 ಮಂದಿ ಕೋರ್ಟ್‌ಗೆ ಹಾಜರು: ಗಡೀಪಾರು ವಿಚಾರಣೆ 27ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
   

ಪುತ್ತೂರು (ದಕ್ಷಿಣ ಕನ್ನಡ): ಗಡೀಪಾರು ನೋಟಿಸ್‌ಗೆ ಸಂಬಂಧಿಸಿ ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ಸೇರಿ 8 ಮಂದಿ, ವಕೀಲರ ಮೂಲಕ ಪುತ್ತೂರು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. 

ಗಡೀಪಾರಿಗೆ ಸಂಬಂಧಿಸಿ ಪೊಲೀಸರು ಸೂಕ್ತ ಮತ್ತು ಸಮರ್ಪಕ ದಾಖಲೆ ಸಲ್ಲಿಸದ ಕಾರಣ ವಿಚಾರಣೆಯನ್ನು ಜೂನ್‌ 27ಕ್ಕೆ ಮುಂದೂಡಿದ ನ್ಯಾಯಾಲಯ, ಸೂಕ್ತ ದಾಖಲೆಗಳನ್ನು ಸಲ್ಲಿಸಲು ಪೊಲೀಸರಿಗೆ ಆದೇಶಿಸಿದೆ.

ಪುತ್ತೂರು ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆಗಳ ವ್ಯಾಪ್ತಿಯ 9 ಮಂದಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ 36 ಮಂದಿಯನ್ನು ಗಡೀಪಾರು ಮಾಡುವ ಸಂಬಂಧ ಕಾನೂನು ಪ್ರಕ್ರಿಯೆ ಪ್ರಾರಂಭವಾಗಿದೆ. ಪುತ್ತೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ಅರುಣ್ ಕುಮಾರ್ ಪುತ್ತಿಲ, ಹಕೀಂ ಕೂರ್ನಡ್ಕ, ಅಬ್ದುಲ್ ರಹಮಾನ್, ಅಝೀಜ್, ಮಹಮ್ಮದ್ ಶಕೀರ್, ಅಬ್ದುಲ್ ಅಝೀಜ್, ಅಶ್ರಫ್, ಮನೋಜ್ ಕುಮಾರ್ ಅವರು ವಿಚಾರಣೆಗೆ ಹಾಜರಾಗಿದ್ದರು.

ADVERTISEMENT

ಅರುಣ್‌ಕುಮಾರ್ ಪುತ್ತಿಲ ಅವರ ಪರವಾಗಿ ಪುತ್ತೂರಿನ ವಕೀಲ ನರಸಿಂಹ ಪ್ರಸಾದ್ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.