ADVERTISEMENT

ಎಚ್.ಡಿ.ಕೋಟೆ: 9 ದಿನವಾದರೂ ಪತ್ತೆಯಾಗದ ಆನೆ ‘ಅಶೋಕ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:35 IST
Last Updated 4 ಡಿಸೆಂಬರ್ 2018, 17:35 IST

ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನ ಅಂಕನಾಥಪುರದ ಬಳಿ ನಡೆಯುತ್ತಿದ್ದ ಹುಲಿ ಸೆರೆ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ‘ಅಶೋಕ’ ಆನೆ 9 ದಿನ ಕಳೆದರೂ ಪತ್ತೆಯಾಗಿಲ್ಲ. ಸದ್ಯ, ಅಭಿಮನ್ಯು, ಕೃಷ್ಣ ಆನೆಗಳ ಸಹಾಯದಿಂದ ಪತ್ತೆ ಕಾರ್ಯ ಮುಂದುವರಿದಿದೆ.

ನ. 26ರಂದು ಮತ್ತಿಗೋಡು ಶಿಬಿರದಿಂದ ಅಶೋಕ, ದ್ರೋಣ ಆನೆಯನ್ನು ಕರೆಸಲಾಗಿತ್ತು. ಕಾರ್ಯಾಚರಣೆ ವೇಳೆ ಸಿಡಿದ ಪಟಾಕಿ ಶಬ್ದಕ್ಕೆ ಹೆದರಿದ ಎರಡೂ ಆನೆಗಳು ಓಡಿ ಹೋಗಿದ್ದವು. ದ್ರೋಣ ಸಿಕ್ಕಿದ್ದು, ಅಶೋಕ ಆನೆಯು ಕಾಡಿನಲ್ಲಿ ಮರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT