ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನ ಜಲಾಶಯದ ಸಮೀಪ ಇರುವ ಬೀಚನಹಳ್ಳಿ ಗ್ರಾಮಕ್ಕೆ ಶುಕ್ರವಾರ ಬೆಳಿಗ್ಗೆ ಒಂಟಿ ಸಲಗವೊಂದು ನುಗ್ಗಿದೆ.
ಸಲಗಕ್ಕೆ ಹೆದರಿರುವ ಗ್ರಾಮಸ್ಥರು ಮನೆಯಿಂದ ಹೊರ ಬರುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಆನೆ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಬಿನಿ ಹಿನ್ನೀರಿಗೆ ಹಾಗೂ ಜಲಾಶಯದ ಸಮೀಪ ಆನೆಗಳ ಹಿಂಡು ಬಂದು ನೀರು ಕುಡಿದು ಹೋಗುತ್ತಿದ್ದವು. ಆದರೆ ಎಂದೂ ಗ್ರಾಮಕ್ಕೆ ಅಥವಾ ಜಮೀನುಗಳಿಗೆ ನುಗ್ಗಿದ ಉದಾಹರಣೆ ಇಲ್ಲ ಎಂದು ಅವರ ಹೇಳಿದ್ದಾರೆ.
ಬೀಚನಹಳ್ಳಿ ಮೈಸೂರಿನಿಂದ 65 ಕಿ.ಮಿ ದೂರದಲ್ಲಿದೆ. ಇಲ್ಲಿಂದ ಮುಂದೆ 10 ಕಿ.ಮೀ ಹೋದರೆ ಕೇರಳ ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.