ADVERTISEMENT

ಕೊಡಗಿನ ರಸ್ತೆಯಲ್ಲಿ ಕಾಡಾನೆಗಳ ವಾಕಿಂಗ್‌!

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 12:53 IST
Last Updated 5 ಏಪ್ರಿಲ್ 2020, 12:53 IST
ನಮ್ಮದೇ ರಸ್ತೆ... ಲಾಕ್‌ಡೌನ್‌ ನಂತರ ಕೊಡಗಿನ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಕಾಡಾನೆಗಳು ರಸ್ತೆಗೆ ಬಂದಿವೆ
ನಮ್ಮದೇ ರಸ್ತೆ... ಲಾಕ್‌ಡೌನ್‌ ನಂತರ ಕೊಡಗಿನ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಕಾಡಾನೆಗಳು ರಸ್ತೆಗೆ ಬಂದಿವೆ   

ಮಡಿಕೇರಿ: ಕೊರೊನಾಕ್ಕೆ ಹೆದರಿ ಜನರು ಮನೆಯಲ್ಲಿದ್ದರೆ, ಕಾಡಾನೆಗಳು ಮಾತ್ರ ಕೊಡಗಿನ ರಸ್ತೆಗಳಲ್ಲಿ ಸಂಚರಿಸುತ್ತಿವೆ.

ಲಾಕ್‌ಡೌನ್‌ ಬಳಿಕ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಹೀಗಾಗಿ, ಕಾಡಾನೆಗಳು ಭೀತಿಯಿಲ್ಲದೇ ಅರಣ್ಯ ಪ್ರದೇಶದಿಂದ ರಸ್ತೆಗೆ ಬರುತ್ತಿವೆ. ಆನೆ ಸೇರಿದಂತೆ ವನ್ಯಜೀವಿಗಳು ಯಾವುದೇ ಅಳುಕು ಇಲ್ಲದೇ ಸಂಚಾರ ನಡೆಸುತ್ತಿರುವ ದೃಶ್ಯ ಒಂದು ವಾರದಿಂದ ಸಾಮಾನ್ಯವಾಗಿದೆ. ಮಾಲ್ದಾರೆ, ಆನೆಚೌಕೂರು, ಸಿದ್ದಾಪುರ, ಗುಹ್ಯದಲ್ಲಿ ಆನೆಗಳು ರಸ್ತೆಗೆ ಬರುತ್ತಿವೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗೇಟ್ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ರಸ್ತೆಯಲ್ಲಿ ನಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ರಸ್ತೆಯಲ್ಲಿ ಕಾಡಾನೆಗಳು ನಡೆಯುತ್ತಿದ್ದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.