ನವದೆಹಲಿ/ಬೆಂಗಳೂರು: ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಂಡೆದ್ದಿರುವ ಬಣದ ಮುಂದಾಳು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಶಿಸ್ತು ಸಮಿತಿಯಿಂದ ನೋಟಿಸ್ ಕೊಡಿಸುವ ಮೂಲಕ, ಬಿ.ವೈ. ವಿಜಯೇಂದ್ರ ಬಣ ಒಂದು ಹಂತದ ಮೇಲುಗೈ ಸಾಧಿಸಿದೆ; ನೋಟಿಸ್‌ಗೆ ಕಿಮ್ಮತ್ತೇ ನೀಡದ ಯತ್ನಾಳ ಬಣ, ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.
ಎರಡು ಬಣಗಳ ಕಚ್ಚಾಟ ತೀವ್ರಗೊಂಡ ಬೆನ್ನಲ್ಲೇ, ಮೌನ ಮುರಿದಿರುವ ಬಿಜೆಪಿ ವರಿಷ್ಠರು, ಕೊನೆಗೂ ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ, ಭಿನ್ನರ ಬಣದ ಮುಂಚೂಣಿಯಲ್ಲಿರುವ ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರು ಯತ್ನಾಳ ಅವರ ಬೆಂಬಲಕ್ಕೆ ನಿಂತಿದ್ದಾರೆ.
ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿರುವ ವಿಜಯೇಂದ್ರ ಅವರು, ಹೊಸ ತಂತ್ರ ಹೆಣೆದಿದ್ದಾರೆ. ಸೋಮವಾರ ಸಭೆ ನಡೆಸಿದ ಬಿಜೆಪಿಯ 21 ಜಿಲ್ಲಾ ಘಟಕಗಳ ಅಧ್ಯಕ್ಷರು, ಯತ್ನಾಳ ಉಚ್ಚಾಟನೆಗೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.